May 9, 2024

Kannada

Live News Updates ಲೈವ್ ಸುದ್ದಿ ನವೀಕರಣಗಳು

  • ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ
    on May 9, 2024 at 7:29 am

    ಬಾಲಿವುಡ್ ನಟಿ, ಸೋನಾಕ್ಷಿ ಸಿನ್ಹಾ ಕಳೆದ ವರ್ಷಾಂತ್ಯದಲ್ಲಿ ಮುಂಬೈನಲ್ಲಿ ಸೀ ಫೇಸಿಂಗ್ ಮನೆ ಕೊಂಡಿದ್ದಾರೆ. 26ನೇ ಮಹಡಿಯಲ್ಲಿರುವ ಮನೆಯ ಒಳಾಂಗಣ ಎಷ್ಟು ಅದ್ಭುತವಾಗಿದೆ ನೋಡಿ.. ಬಾಲಿವುಡ್ ನಟಿ ಸೋನಾಕ್ಷಿಯದ್ದು ಅದ್ದೂರಿ ಜೀವನಶೈಲಿ. ಐಷಾರಾಮಿ ಕಾರುಗಳಿಂದ ಹಿಡಿದು ಸೊಗಸಾದ ಬಟ್ಟೆಗಳವರೆಗೆ.. ಆಕೆಯ ಬಾಂದ್ರಾ ಮನೆ ಕೂಡಾ ಈ ಅದ್ಧೂರಿತನವನ್ನೊಳಗೊಂಡಿದೆ.  ತನ್ನ ತಂದೆ ಶತ್ರುಘ್ನ ಸಿನ್ಹಾ ಅವರ ಹೆಜ್ಜೆಗಳನ್ನು ಅನುಸರಿಸಿ, ನಟಿ 2010 ರಲ್ಲಿ ದಬಾಂಗ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ, ರೌಡಿ ರಾಥೋರ್, ಡಬಲ್ ಎಕ್ಸ್‌ಎಲ್, ದಬಾಂಗ್ 3, ಲೂಟೆರಾ, ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದರು. ನಟಿ ಮಾತ್ರವಲ್ಲದೆ ಸೋನಾಕ್ಷಿ ಪ್ರೆಸ್-ಆನ್ ನೇಲ್ ಬ್ರಾಂಡ್ ಸೋಜಿಯ ಮಾಲೀಕರೂ ಆಗಿದ್ದಾರೆ. ಹೀರಾಮಂಡಿ ಬಿಡುಗಡೆಯಾದಾಗಿನಿಂದ ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ ಭಾರಿ ಗಮನ ಸೆಳೆಯುತ್ತಿದ್ದಾರೆ. ಇವರು ಕಳೆದ ವರ್ಷ ಆಗಸ್ಟ್ 29ರಂದು ಪಿರಮಿಡ್ ಡೆವಲಪರ್ಸ್ ಬಳಿ ಬಾಂದ್ರಾದ ಕೆಸಿ ರಸ್ತೆಯಲ್ಲಿರುವ ಕಟ್ಟಡದ  26ನೇ ಮಹಡಿಯಲ್ಲಿ ಮನೆ ಕೊಂಡಿದ್ದಾರೆ.  2,208.77 ಚದರ ಅಡಿ ಕಾರ್ಪೆಟ್ ಪ್ರದೇಶ ಹೊಂದಿರುವ ಮನೆ, ತನ್ನ ಈಸ್ತೆಟಿಕ್ ಸೌಂದರ್ಯಕ್ಕಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಿದೆ. ಅದೂ ಅಲ್ಲದೆ, ಮುಂಬೈನ ಪ್ರತಿ ನಟನಟಿಯರೂ ಬಯಸುವಂತೆ ಇದು ಸಮುದ್ರಕ್ಕೆ ಮುಖ ಮಾಡಿದೆ. ಸೋನಾಕ್ಷಿಯ ಅಂದವಾದ ಸಮುದ್ರಾಭಿಮುಖವಾದ ಮನೆಯು ಮುಂಬೈನ ಹಸ್ಲ್‌ನಿಂದ ತಪ್ಪಿಸಿಕೊಳ್ಳಲು ಪರಿಪೂರ್ಣ ಸ್ವರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಚಿತ್ರಕಲೆಯನ್ನು ಇಷ್ಟಪಡುವ ನಟಿ, ಆರ್ಟ್‌ ಸ್ಟುಡಿಯೋವನ್ನು ಮನೆಯಲ್ಲಿ ಹೊಂದಿದ್ದು, ಮಡಚಬಹುದಾದ ವಿಶೇಷತೆಯನ್ನಿದು ಹೊಂದಿದೆ.  ಬಹಳಷ್ಟು ಮಡಚಬಹುದಾದ ಕಪಾಟುಗಳನ್ನು ಅಳವಡಿಸುವ ಮೂಲಕ, ಮನೆಯ ಜಾಗಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಸೋನಾಕ್ಷಿ ಸಿನ್ಹಾ.  ನೀಲಿ ಬಣ್ಣದ ವಿಂಟೇಜ್ ಅಲ್ಮಿರಾದಿಂದ ಹಿಡಿದು ಕಿತ್ತಳೆ ಬಣ್ಣದ ಮಂಚದವರೆಗೆ ಮನೆಯಲ್ಲಿ ರೋಮಾಂಚಕ ವರ್ಣಗಳನ್ನು ಸೇರಿಸಲಾಗಿದೆ.  ಸೋನಾಕ್ಷಿ ಅವರ ಮನೆಯ ನೆಚ್ಚಿನ ಮೂಲೆಯೆಂದರೆ ಅವರ ಬಾಲ್ಕನಿ. ಇದು ತೆರೆದ ಗಾಳಿಯ ಜಾಕುಝಿಗಿಂತ ಕಡಿಮೆಯಿಲ್ಲ. ಆಕೆಯ ಮನೆಯ ಈ ಮೂಲೆಯು ಸಮುದ್ರದ ಸುಂದರ ನೋಟವನ್ನು ನೀಡುತ್ತದೆ. ಪೂರ್ತಿ ಮನೆಯನ್ನು ಕಂದು ಮತ್ತು ಗೋಲ್ಡ್ ಟೋನ್‌ನಿಂದ ಸಿಂಗರಿಸಲಾಗಿದ್ದು ಇದು ಒಳಾಂಗಣಕ್ಕೆ ಹೆಚ್ಚು ಅದ್ಧೂರಿ ಲುಕ್ ನೀಡಿದೆ. 

  • ಪಾರ್ವತಿ ದೇವಿಯಾಗಿ ಫೇಮ್ ಆದ ಈ ನಟಿ ಎದೆ ಸೀಳಲ್ಲ, ಎದೆಯನ್ನೇ ತೋರಿಸಿದ ವೀಡಿಯೋ ವೈರಲ್!
    on May 9, 2024 at 7:22 am

    ವಿಘ್ನಹರ್ತ ಗಣೇಶ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ ಮಿಂಚಿದ್ದ ನಟಿ ಅಕಾಂಕ್ಷಾ ಪುರಿ ಬೋಲ್ಡ್ ಆಗಿದ್ದಾರೆ. ಇವರ ಬೋಲ್ಡ್ ಅವತಾರ ನೋಡಿದ್ರೆ, ಇವರೇನಾ ಪಾರ್ವತಿ ದೇವಿಯಾಗಿದ್ದು ಎಂದೆನಿಸುತ್ತೆ. ಬರೀ ಎದೆ ಸೀಳಲ್ಲ, ಅರ್ಧಕ್ಕರ್ಧ ಎದೆಯನ್ನೇ ತೋರಿಸೋ ಉಡುಗೆ ತೊಟ್ಟ ಇವರದ್ದೊಂದು ವೀಡಿಯೋ ವೈರಲ್ ಆಗಿದ್ದು, ಪಡ್ಡೆ ಹುಡುಗರ ಕಣ್ಣು ಬಾಯಿ ಬಿಟ್ಕೊಂಡು ಮತ್ತೆ ಮತ್ತೆ ಈ ರೀಲ್ಸ್ ನೋಡುತ್ತಿದ್ದಾರೆ.    ಈಕೆ ಆಕಾಂಕ್ಷ ಪುರಿ (Akanksha Puri) ಹಿಂದಿ, ತಮಿಳು, ಕನ್ನಡ, ಮಲಯಾಲಂ ಸಿನಿಮಾಗಳಲ್ಲಿ, ಹಿಂದಿ ಸೀರಿಯಲ್ ಗಳಲ್ಲಿ, ಅದಕ್ಕೂ ಹೆಚ್ಚಾಗಿ ಮ್ಯೂಸಿಕ್ ಆಲ್ಬಂಗಳಲ್ಲಿ ಹೆಚ್ಚು ಹೆಸರು ಮಾಡಿದ ನಟಿ. ಆದರೂ ಈಕೆ ಜನಪ್ರಿಯತೆ ಪಡೆದದ್ದು ಪಾರ್ವತಿ ದೇವಿಯಾಗಿ.    ನಟಿ ಮತ್ತು ಮಾಡೆಲ್ (Model) ಆಗಿ ಗುರುತಿಸಿಕೊಂಡಿರುವ ಆಕಾಂಕ್ಷಾ ಪುರಿ ವಿಘ್ನಹರ್ತ ಗಣೇಶ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ, ದೈವೀಕತೆ ತುಂಬಿದ ಪಾತ್ರದ ಮೂಲಕ ಹೆಸರು ಮಾಡಿದ್ದರು. ಇದೇ ಸೀರಿಯಲ್‌ನಲ್ಲಿ ಸತಿದೇವಿಯಾಗಿಯೂ ಆಕಾಂಕ್ಷಾ ನಟಿಸಿದ್ದರು.    ಮಾಡೆಲ್ ಆಗಿದ್ದ ಆಕಾಂಕ್ಷ ತಮಿಳಿನ ಅಲೆಕ್ಸ್ ಪಾಂಡಿಯನ್ (Alex Pandian) ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ನಂತರ ಆಕ್ಷನ್ ಸಿನಿಮಾ, ಮಲಯಾಳದ ಪ್ರೈಸ್ ದ ಲಾರ್ಡ್, ಅಮರ್ ಅಕ್ಬರ್ ಆಂಥೋನಿ, ಕನ್ನಡದಲ್ಲಿ ಲೊಡ್ಡೆ, ಹಿಂದಿಯಲ್ಲಿ ಕ್ಯಾಲೆಂಡರ್ ಗರ್ಲ್ ಸಿನಿಮಾದಲ್ಲಿ ನಟಿಸಿದ್ದಾರೆ.    ಲೊಡ್ಡೆ 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಗೆ ಅಕಾಂಕ್ಷಾ ಪುರಿ ನಾಯಕಿಯಾಗಿದ್ದರು. ಇದು ಅಕಾಂಕ್ಷಾ ಅವರ ಡೆಬ್ಯೂ ಕನ್ನಡ ಸಿನಿಮಾವಾಗಿತ್ತು.    ಅಕಾಂಕ್ಷಾ ಇನ್ಸ್ಪೆಕ್ಟರ್ ಅವಿನಾಶ್ ಎನ್ನುವ ವೆಬ್ ಸೀರೀಸ್, ಸಿಐಡಿ, ಬಿಗ್ ಬಾಸ್ 13 ಮತ್ತು 15 ನಲ್ಲೂ ಅತಿಥಿಯಾಗಿ ಮತ್ತು ಚಾಲೆಂಜರ್ ಆಗಿ ಹಾಗೂ ಬಿಗ್ ಬಾಸ್ ಓಟಿಟಿಯಲ್ಲೂ  (Bigg Boss OTT) ಭಾಗವಹಿಸಿದ್ದರು. ಅಷ್ಟೇ ಅಲ್ಲ ಸ್ವಯಂವರ್ ವಿಕಾ ದಿ ವೋಹ್ಟಿಯಲ್ಲೂ ಸಹ ಭಾಗಿಯಾಗಿದ್ದರು.    ಇನ್ನು 2017 ರಿಂದ ಇಲ್ಲಿಯವರೆಗೆ ಹಲವಾರು ಮ್ಯೂಸಿಕ್ ಆಲ್ಬಂಗಳಲ್ಲೂ ನಟಿಸಿದ್ದಾರೆ ಈ ಬೋಲ್ಡ್ ಬ್ಯೂಟಿ. ಆದರೆ ಈಕೆ ಎಲ್ಲದಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದದ್ದು ಮಾತ್ರ ಪಾರ್ವತಿಯಾಗಿ. ಆದರೆ ಈ ಪಾರ್ವತಿ ದೇವಿಯ ಬೋಲ್ಡ್ ಅವತಾರ ನೋಡಿ ಪಡ್ಡೆ ಹುಡುಗರೂ ಸಹ ಬಿದ್ದು ಬಿಡ್ತಾರೆ.    ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾನೆ ಆಕ್ಟೀವ್ ಆಗಿರುವ ಅಕಾಂಕ್ಷ ಪುರಿ ಹೆಚ್ಚಾಗಿ ತಮ್ಮ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಮತ್ತು ಬ್ಯೂಟಿ ಫುಲ್ ಫೋಟೋಗಳದ್ದೆ ಹೆಚ್ಚು ಕಾರುಬಾರು.    ಸ್ವಿಮ್ ಸೂಟ್, ಬಿಕಿನಿ, ಬೋಲ್ಡ್ ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಕಾಂಕ್ಷಾಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ 2687 ಫೋಟೋಗಳನ್ನು ಹಂಚಿಕೊಂಡಿರುವ ಈಕೆಗೆ ಸುಮಾರು 3.6 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ.   

  • ಹೇಳದೇ ಕೇಳದೇ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗೆ ಪರ್ಮನೆಂಟ್ ರಜೆ ನೀಡಿದ ಏರ್ ಇಂಡಿಯಾ..!
    on May 9, 2024 at 7:21 am

    ನವದೆಹಲಿ: ಹೇಳದೇ ಕೇಳದೇ ಸಾಮೂಹಿಕ ಸಿಖ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ.  ನಿನ್ನೆ ಏರ್ ಇಂಡಿಯಾದ 300ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ ಹಾಕಿ ಫೋನ್ ಸ್ವಿಚ್ಆಫ್ ಮಾಡಿ ಕುಳಿತಿದ್ದರು. ಇದರಿಂದ 70ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ದೇಶಿಯ ವಿಮಾನಗಳ ಪ್ರಯಾಣ ರದ್ದಾಗಿದ್ದು, ಮತ್ತೆ ಕೆಲವು ವಿಮಾನಗಳ ಪ್ರಯಾಣ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು, ಇದರಿಂದ ಏರ್‌ಲೈನ್ಸ್ ದೊಡ್ಡಮಟ್ಟದಲ್ಲಿ ಮುಜುಗರಕ್ಕೊಳಗಾಗಿತ್ತು. ಹೀಗಾಗಿ ನಿನ್ನೆ ಸಂಜೆ 4 ಗಂಟೆಯೊಳಗೆ ಕೆಲಸದ ಸ್ಥಳಕ್ಕೆ ಹಾಜರಾಗುವಂತೆ ಏರ್‌ಲೈನ್ಸ್ ಸೂಚನೆ ನೀಡಿತ್ತು. ಆದರೆ ಈ ಸೂಚನೆಗೂ ತಲೆಕೆಡಿಸಿಕೊಳ್ಳದ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ.  ಈ ಹಿನ್ನೆಲೆಯಲ್ಲಿ ಈಗ ಏರ್ ಇಂಡಿಯಾ ಬೇಜವಾಬ್ದಾರಿ ತೋರಿದ ತನ್ನ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ. ಏರ್ ಇಂಡಿಯಾ ನೌಕರರ ಈ ಸಾಮೂಹಿಕ ರಜೆಯಿಂದಾಗಿ ಇಂದೂ ಕೂಡ 74 ವಿಮಾನಗಳ ಪ್ರಯಾಣ ಸ್ಥಗಿತಗೊಂಡಿದೆ.  ಟಾಟಾ ಮಾಲೀಕತ್ವದಲ್ಲಿರುವ ಏರ್ ಇಂಡಿಯಾದ ಉದ್ಯೋಗಿಗಳು ವೇತನ ಪರಿಷ್ಕರಣೆ, ಹಾಗೂ ಇನ್ಸೆಂಟಿವ್ ಹೊಸ ಉದ್ಯೋಗ ನೀತಿ  ಮುಂತಾದ ವಿಚಾರಗಳ ಕಾರಣಕ್ಕೆ ಪ್ರತಿಭಟನೆಯ ರೂಪವಾಗಿ ಈ ಸಾಮೂಹಿಕ ರಜೆ ಹಾಕಿದ್ದಾರೆ ಎಂದು ವರದಿ ಆಗಿದೆ.  ಹೇಳ್ದೆ ಕೇಳ್ದೆ ಮಾಸ್ ಸಿಕ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ: 70ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್ ಸಿಬ್ಬಂದಿಗಳನ್ನು ನಡೆಸಿಕೊಳ್ಳುವುದರಲ್ಲಿ ಸಮಾನತೆ ಇಲ್ಲ, ಕೆಲವು ಸಿಬ್ಬಂದಿಗೆ ಉನ್ನತ ಹುದ್ದೆಗೆ ಸಂದರ್ಶನ ನಡೆಸಿದ್ದು ಅದರಲ್ಲಿ ಅವರು ತೇಗರ್ಡೆ ಹೊಂದಿದ ನಂತರವೂ ಅವರಿಗೆ ಕೆಳ ಹಂತದ ಹುದ್ದೆಯಲ್ಲೇ ಮುಂದುವರೆಸಲಾಗಿದೆ. ಅಲ್ಲದೇ ಅವರಿಗೆ ಸಿಗುವ ಪರಿಹಾರ ಪ್ಯಾಕೇಜ್‌ನಲ್ಲಿ ಕೂಡ ಸ್ವಲ್ಪ ಬದಲಾವಣೆ ಮಾಡಬೇಕು ಎಂಬುದು ಉದ್ಯೋಗಿಗಳ ಆಗ್ರಹವಾಗಿದೆ. ಏರ್ ಏಷ್ಯಾ ಇಂಡಿಯಾವನ್ನು ಏರ್ ಇಂಡಿಯಾ ಜೊತೆ ವಿಲೀನ ಮಾಡಿದ ನಂತರ ಇದೆಲ್ಲಾ ಸಮಸ್ಯೆಗಳು ಪ್ರಾರಂಭವಾಗಿವೆ ಎಂದು ಹೆಸರು ಹೇಳಲಿಚ್ಚಿಸದ ಉದ್ಯೋಗಿಯೊಬ್ಬರು ಆಂಗ್ಲ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.  ತಮ್ಮ ಡ್ಯೂಟಿ ವೇಳಾಪಟ್ಟಿ ಹಾಗೂ ವೇತನದ ಪ್ಯಾಕೇಜ್‌ನಲ್ಲಿಯೂ ಬದಲಾವಣೆ ಕಾಣಿಸಿಕೊಂಡ ನಂತರ ಕಳೆದ ತಿಂಗಳಷ್ಟೇ ಟಾಟಾ ಮಾಲೀಕತ್ವದ ವಿಸ್ತಾರ ಏರ್‌ಲೈನ್ಸ್‌ನಲ್ಲಿ ಪೈಲಟ್‌ಗಳು ಹಾಗೂ ಕ್ಯಾಬಿನ್ ಸಿಬ್ಬಂದಿಯ ಪ್ರತಿಭಟನೆ ನಡೆಸಿದ್ದರು. ಇದಾಗಿ ತಿಂಗಳು ಮಾಸುವ ಮೊದಲು ಏರ್ ಇಂಡಿಯಾ ಏಕ್ಸ್‌ಪ್ರೆಸ್‌ ಉದ್ಯೋಗಿಗಳ ಪ್ರತಿಭಟನೆ ಈಗ ಟಾಟಾಗ್ರೂಪ್‌ಗೆ ಹೊಸ ಸಮಸ್ಯೆಯಾಗಿದೆ.  ಅನಿರೀಕ್ಷಿತವಾಗಿ ನಮ್ಮ ಅತಿಥಿಗಳಿಗೆ ಎದುರಾದ ಈ ತೊಂದರೆಯನ್ನು ಪರಿಹರಿಸಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇವತ್ತು ನಾವು 292 ವಿಮಾನಗಳನ್ನು ಹಾರಾಟ ನಡೆಸಲಿದ್ದೇವೆ. ನಾವು ನಮ್ಮ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸಿದ್ದು 20 ಮಾರ್ಗಗಳಲ್ಲಿ ಏರ್ ಇಂಡಿಯಾ ನಮಗೆ ಬೆಂಬಲಿಸಲಿದೆ. ಆದರೂ ನಮ್ಮ 74 ವಿಮಾನಗಳ ಸಂಚಾರವೂ ಸ್ಥಗಿತಗೊಂಡಿದೆ. ಆದರೂ ನಮ್ಮ ಫ್ಲೈಟ್ ಬುಕ್ ಮಾಡಿದ ಗ್ರಾಹಕರಿಗೆ ನಾವು ಈ ಸಮಸ್ಯೆಯಿಂದ ತಾವು ಬುಕ್ ಮಾಡಿದ ವಿಮಾನ ಪ್ರಯಾಣವೂ ಸ್ಥಗಿತಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಳುತ್ತೇವೆ. ಒಂದು ವೇಳೆ ವಿಮಾನ ಪ್ರಯಾಣ ರದ್ದಾದರೆ ಅಥವಾ ಮೂರು ಗಂಟೆಗಿಂತ ಹೆಚ್ಚು ವಿಳಂವಾದರೆ ನಾವು ಸಂಪೂರ್ಣ ಹಣವನ್ನು ವಾಪಸ್ ಮಾಡುತ್ತೇವೆ. ಅಥವಾ ಉಚಿತವಾಗಿ ಮುಂದಿನ ಪ್ರಯಾಣಕ್ಕೆ ಅವಕಾಶ ನೀಡುತ್ತೇವೆ ಎಂದು ಏರ್‌ ಇಂಡಿಯಾ  ಎಕ್ಸ್‌ಪ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಜೊತೆಗೆ WhatsApp (+91 6360012345) ಹಾಗೂ airindiaexpress.com ನ್ನು ಸಂಪರ್ಕಿಸುವಂತೆ ಕೇಳಿದೆ. ನೂರಾರು ವಿಸ್ತಾರ ವಿಮಾನಗಳ ಸಂಚಾರ ಏಕಾಏಕಿ ರದ್ದು, ಪ್ರಯಾಣಿಕರು ಕಂಗಾಲು ಇದರ ಜೊತೆಗೆ 30 ಉದ್ಯೋಗಿಗಳನ್ನು ಸಂಸ್ಥೆ ಸೇವೆಯಿಂದ ವಜಾಗೊಳಿಸಿದೆ. ಉದ್ಯೋಗಿಗಳು ಹಾಕಿದ ಸಾಮೂಹಿಕ ರಜೆಯೂ ಯಾವುದೇ ಸಮರ್ಥನೀಯ ಕಾರಣವಿಲ್ಲದ್ದಾಗಿದ್ದು, ಪೂರ್ವ ನಿರ್ಧಾರಿತವಾಗಿದ್ದು, ಸಂಘಟಿತವಾಗಿ ಕೆಲಸದಿಂದ ದೂರವಿರುವುದನ್ನು ಸ್ಟಷ್ಟವಾಗಿ ಸೂಚಿಸುತ್ತಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೂರಿದೆ. 

  • ಡಿಕೆ- ಎಚ್​ಡಿಕೆ ಮಧ್ಯೆ ‘ಕಥಾನಾಯಕ’ ಕಾಳಗ! ಮಹಿಳಾ ಅಧಿಕಾರಿಗಳು SIT ಮುಂದೆ ಹೇಳಿದ್ದೇನು?
    on May 9, 2024 at 7:15 am

    ಬೆಂಗಳೂರು(ಮೇ.09):  ದಿನಕೊಂದು ಟ್ವಿಸ್ಟ್​​… ಕ್ಷಣಕ್ಕೊಂದು ಅಪ್​ಡೇಟ್​​ ಇದು ಪ್ರಜ್ವಲ್​ ರೇವಣ್ಣ ಕಾಮಕಾಂಡದ ಸದ್ಯದ ಒನ್​ಲೈನ್​ ಸ್ಟೋರಿ.. ಅಪ್ಪ ಜೈಲಿನಲ್ಲಿ.. ಮಗ ಫಾರೀನ್​ನಲ್ಲಿದ್ರೂ ಬೆಂಗಳೂರಿನಲ್ಲಿ ಪೆನ್​ಡ್ರೈವ್​​ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​​ ಸಿಕ್ಕಿದೆ. ಇವತ್ತು ರೇವಣ್ಣನ SIT ಕಸ್ಟಡಿ ಅವಧಿ ಮುಕ್ತಾಯವಾದ್ರೆ.. ಪ್ರಜ್ವಲ್​​ ರೇವಣ್ಣ ಕೋರಿದ್ದ 7 ದಿನ ಅವಕಾಶವೂ ಮುಗಿದಿತ್ತು.. ಆದ್ರೆ ರೇವಣ್ಣ ಜೈಲಿಗೆ ಹೋದ್ರೆ ಮಗ ಪ್ರಜ್ವಲ್​ ಮಾತ್ರ ಮತ್ತೆ ಭಾರತಕ್ಕೆ ಬರುವ ಮನಸ್ಸು ಮಾತ್ರ ಮಾಡಿಲ್ಲ.. ಇದೆಲ್ಲದ್ರ ಜೊತೆಗೆ ಇನ್ನಿಬ್ಬರು ಸಂತ್ರಸ್ಥೆಯರು ಇವತ್ತು ಪ್ರಜ್ವಲ್​ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾದ್ರೆ ಸದ್ಯ ಪ್ರಜ್ವಲ್​ ರಾಸಲೀಲೆ ಪ್ರಕರಣ ಈಗ ಎಲ್ಲಿಗೆ ಬಂದು ನಿಂತಿದೆ. ಪೆನ್​ಡ್ರೈವ್​ ಕಹಾನಿಯ ಕಂಪ್ಲೀಟ್​​ ಡಿಟೇಲ್ಸೇ ಇವತ್ತಿನ ಎಫ್​ಐಆರ್​​. ಹೀಗೆ ದಿನಕ್ಕೊಂದು ದೂರು ಸದ್ಯ ಪ್ರಜ್ವಲ್​ ವಿರುದ್ಧ ದಾಖಲಾಗ್ತಿದೆ. ಅಪ್ಪ ಜೈಲು ಪಾಲಾದ್ರೆ ಮಗ ಇನ್ನೂ ಭಾರತದ ಕಡೆ ತಲೆ ಹಾಕಿ ಸಹ ಮಲಗಿಲ್ಲ. ಇನ್ನೂ ಆತ ಬಂದ್ರೆ ಆತನ ಕೇರ್​​ ಆಫ್​ ಅಡ್ರೆಸ್ಸೂ ಸಹ ಪರಪ್ಪನ ಅಗ್ರಹಾರವೇ.. ಇನ್ನೂ ಪ್ರಕರಣದ ಅಪ್​ಡೇಟ್ಸ್​​ ಇಷ್ಟಾದ್ರೆ ಎಂದಿನಂತೆ ರಾಜಕಾರಣಿಗಳ ಟಾಕ್​ ವಾರ್​​ ಮುಂದುವರೆದಿತ್ತು. News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ! ಪ್ರಜ್ವಲ್​ ರಾಸಲೀಲೆ ಕೇಸ್​​​​ನಲ್ಲಿ ತನಿಖೆ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ನಡೆಯುತಿದ್ಯೋ ಗೊತ್ತಿಲ್ಲ ಆದ್ರೆ ರಾಜಕಾರಣಿಗಳ ಹೇಳಿಕೆಗಳು, ಪ್ರತ್ಯಾರೋಪಗಳು ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ನಡುವಿನ ಪೆನ್​ಡ್ರೈವ್​ ಫೈಟ್ ಇಡೀ ಕರ್ನಾಟಕ ರಾಜಕಾರಣವನ್ನೇ ಹೊಸ ದಿಕ್ಕಿಗೆ ಕೊಂಡೊಯ್ಯುತ್ತಿದೆ. ಪ್ರಜ್ವಲ್​ ರೇವಣ್ಣ ವಿರುದ್ಧದ ಆರೋಪದಿಂದ ಜೆಡಿಎಸ್​ಗೆ ಮುಜುಗರ ಆಗಿದ್ದಂತೂ ಸತ್ಯ. ಇದೇ ವಿಚಾರ ಇಟ್ಟುಕೊಂಡು ರಾಜಕೀಯ ನಾಯಕರೂ ಕೆಸರೆರಚಾಟಕ್ಕೆ ಇಳಿದಿದ್ದಾರೆ. ಆದ್ರೆ ಇದೆಲ್ಲದ್ರ ನಡುವೆ ಎಲ್ಲರಿಗೂ ಇರುವ ಅತೀ ದೊಡ್ಡ ಪ್ರಶ್ನೆ ಅಂದ್ರೆ ಪ್ರಜ್ವಲ್​ ಯಾವಾಗ ಭಾರತಕ್ಕೆ ಬರ್ತಾನೆ ಅಂತ​. ಇದಕ್ಕೆಲ್ಲಾ ಕಾಲಾನೇ ಉತ್ತರ ನೀಡಲಿದೆ.  

  • ದೇಶದ ಸಂವಿಧಾನ ಅರಿಯದೇ ವರ್ತಿಸುವ ಪ್ರಧಾನಿ ಮೋದಿ: ಸಚಿವ ಮಹದೇವಪ್ಪ
    on May 9, 2024 at 7:14 am

    ಮೈಸೂರು (ಮೇ.09): ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ಘೋಷಿಸಿದ್ದ ಪ್ರಧಾನಿಗಳು ಇದೀಗ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿ ತನದ ಪ್ರತೀಕವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ. ಮೀಸಲಾತಿಯು ಐಸಿಹಾಸಿಕ ದೌರ್ಜನ್ಯ ಹಾಗೂ ಅವಮಾನಕ್ಕೆ ಒಳಗಾದ ಜನ ಸಮುದಾಯಕ್ಕೆ ನೀಡಬೇಕಾದ ಅಂಶ ಎಂಬ ಸಂಗತಿಯು ಸಂವಿಧಾನದಲ್ಲಿ ಸ್ಪಷ್ಟವಾಗಿದ್ದರೂ ಕೂಡಾ ಅದನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ ಇಡಬ್ಲ್ಯೂಎಸ್ ಹೆಸರಿನಲ್ಲಿ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಭಾರತದ ವಿಭಜನೆ ಆದ ಸಂದರ್ಭದಲ್ಲಿ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದ ಮುಸ್ಲೀಮರು ಪಾಕಿಸ್ತಾನದ ಸದಸ್ಯರಾದರು. ಭಾರತವನ್ನೇ ನಂಬಿ ಇಲ್ಲೇ ಇದ್ದ ಮುಸ್ಲಿಮರು ಭಾರತೀಯರಾದರು ಎಂದಿದ್ದಾರೆ. ಆ ಸಂದರ್ಭದಲ್ಲಿ ಈ ದೇಶದ ಅಲ್ಪಸಂಖ್ಯಾತರು, ಇಲ್ಲಿನ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಇಲ್ಲಿ ಜೀವಿಸಲು ನಿರ್ಧರಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಟ್ಟ ಅವರೊಂದಿಗೆ ಸೌಹಾರ್ದತೆಯಿಂದ ಇದ್ದು ಅವರನ್ನು ಕಾಪಾಡಬೇಕಾದ್ದು ಭಾರತೀಯರಾದ ನಮ್ಮ ಜವಾಬ್ದಾರಿ ಎಂದಿದ್ದಾರೆ. ಆದರೆ ಇತ್ತೀಚೆಗೆ ಬಾಬಾ ಸಾಹೇಬರ ಮೇಲೆ ನಕಲಿ ಪ್ರೀತಿ ತೋರುತ್ತಿರುವ ಪ್ರಧಾನಿಗಳು ಅವರ ಮಾತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ತಾನೊಬ್ಬ ಎಲ್ಲಾ ಸಮುದಾಯಗಳ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಯ ಕಾರಣಕ್ಕೆ ಮುಸ್ಲೀಮ ಸಮುದಾಯಗಳ ನೇರವಾಗಿ ದ್ವೇಷ ಕಾರುತ್ತಿರುವುದು ನನ್ನಲ್ಲಿ ಆತಂಕ ಹುಟ್ಟಿಸಿದೆ. ಬಿಜೆಪಿ ಅಧಿಕಾರದಲ್ಲಿ ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳ ಚೇತರಿಕೆ: ನಿರ್ಮಲಾ ಸೀತಾರಾಮನ್ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ವಿರೋಧಿ ತಂತ್ರವನ್ನು ಪಾಲಿಸುತ್ತಿದ್ದ ಮತ್ತು ನಾವು ಇರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುವಂತಹ ಸಂಸದರು ಮತ್ತು ಸಚಿವರನ್ನು ತನ್ನ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿಗಳು ಮೂಲತಃ ಮೀಸಲಾತಿಯ ವಿರೋಧಿಯೇ ಆಗಿದ್ದು ಚುನಾವಣಾ ಕಾರಣಕ್ಕಾಗಿ ಸಂವಿಧಾನದ ರಕ್ಷಣೆ ಎಂಬ ಪದವನ್ನು ಬಳಸುತ್ತಿರುವ ಇವರ ಕುತಂತ್ರದ ಮಾತುಗಳನ್ನು ಯಾರೂ ನಂಬಬಾರದು ಎಂದು ಅವರು ತಿಳಿಸಿದ್ದಾರೆ.

  • ರಣವೀರ್​- ದೀಪಿಕಾ ಬೇರೆಯಾಗಿದ್ದು ನಿಜನಾ? ಉಂಗುರ ತೋರಿಸಿ ನಟ ಡಿವೋರ್ಸ್​ ಕುರಿತು ಹೇಳಿದ್ದೇನು?
    on May 9, 2024 at 7:11 am

    ಸದ್ಯ ಪಠಾಣ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆಯ ಗರ್ಭಧಾರಣೆಯ ವಿಷಯ ಹಾಟ್ ವಿಷಯವಾಗಿದೆ. ಇದಕ್ಕೆ ಕಾರಣ,  ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಯ ಫ್ಯಾನ್ಸ್​ಗೂ ಸಕತ್​ ಆಘಾತಕಾರಿಯಾಗಿರುವ ವಿಷಯವೊಂದು  ನಡೆದಿದೆ. ಅದೇನೆಂದರೆ, ರಣವೀರ್​ ಸಿಂಗ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದ್ದ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಅವರು ಡಿಲೀಟ್​ ಮಾಡಿದ್ದಾರೆ. ಇದರಿಂದ  ದಂಪತಿ ನಡುವೆ ಕಿರಿಕ್ ಆಗಿರಬಹುದೇ ಎಂಬ ಅನುಮಾನ ಕಾದಿದೆ. ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ ಜನಮೆಚ್ಚುಗೆ ಗಳಸಿದ್ದಾರೆ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ.  ಇಬ್ಬರೂ 5 ವರ್ಷಗಳಿಗೂ ಹೆಚ್ಚು ಕಾಲ ಈ ಜೋಡಿ ಹಾಯಾಗಿ ಸಂಸಾರ ಮಾಡಿಕೊಂಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ. ಈಗ ಇದ್ದಕ್ಕಿದ್ದಂತೆ ದೀಪಿಕಾ ಪತಿರಾಯ ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಕಿತ್ತುಹಾಕಿದ್ದು ಯಾಕೆ? ಎಲ್ಲರಿಗೂ ಸಂಶಯವಂತೂ ಮೂಡಿತ್ತು. ಇದಾದ ಬೆನ್ನಲ್ಲೇ  ರಣವೀರ್​ ಸಿಂಗ್​ ಟೀಂ ಸ್ಪಷ್ಟನೆ ಕೊಟ್ಟಿತ್ತು. ನಟನ ಇನ್​ಸ್ಟಾಗ್ರಾಮ್​ನಲ್ಲಿ ಹಲವಾರು ಫೋಟೋ, ವಿಡಿಯೋಗಳು ಇದ್ದ ಹಿನ್ನೆಲೆಯಲ್ಲಿ, 2023 ರ ಹಿಂದಿನ ಎಲ್ಲಾ ಫೋಟೊ, ವಿಡಿಯೋಗಳನ್ನು ಆರ್ಕೈವ್ ಮಾಡಲಾಗಿದೆಯೇ ವಿನಾ ಡಿಲೀಟ್​ ಮಾಡಲಾಗಿಲ್ಲ.  ಅದರಲ್ಲಿ ಮದುವೆಯ ಫೋಟೋ, ವಿಡಿಯೋಗಳು ಇವೆಯಷ್ಟೇ. ಅಷ್ಟೇ ಅಲ್ಲದೇ ದೀಪಿಕಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲವೂ ಇನ್ನೂ ಇದೆ ಎಂದಿದೆ. ಇದನ್ನು ಕೇಳಿ ಸ್ಟಾರ್​ ದಂಪತಿಯ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಸಂಪೂರ್ಣ ಬೆತ್ತಲಾದ ರಣಬೀರ್​ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ ಇದೀಗ ಖುದ್ದು ರಣವೀರ್​ ಈ ಸುದ್ದಿಯನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ.  ಆಭರಣ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಅವರು, ತಮಗೆ ಇಷ್ಟವಾದ ಆಭರಣಗಳ ಬಗ್ಗೆಯೂ ಮಾತನಾಡಿದರು. ಈ ವೇಳೆ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆಯೂ ಹೇಳುತ್ತಾ,  ‘ದೀಪಿಕಾ ನನಗೆ ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಕೊಟ್ಟ ಉಂಗುರ ನನ್ನ ಪಾಲಿನ ಅತ್ಯಂತ ಅಮೂಲ್ಯವಾದ ಆಭರಣ’ ಎಂದರು. ಮಾತ್ರವಲ್ಲದೆ ತಾವು ಮದುವೆಯ ಉಂಗುರವನ್ನು ಸದಾ ಧರಿಸುವುದಾಗಿ ಹೇಳಿ ಉಂಗುರವನ್ನು ತೋರಿಸಿದರು.  ತಮ್ಮ ತಾಯಿಯ ವಜ್ರದ ಕಿವಿಯೋಲೆ ಹಾಗೂ ನನ್ನ ಅಜ್ಜಿಯ ಮುತ್ತಿನ ಹಾರದೊಂದಿಗೆ ಸಹ ನನಗೆ ವಿಶೇಷ ಪ್ರೀತಿಯಿದೆ ಎಂದೂ ಹೇಳಿದರು. ಪತ್ನಿ ಕೊಟ್ಟಿರುವ ಉಂಗುರ ಸೇರಿದಂತೆ ವಿವಿಧ ಆಭರಣದ ಜೊತೆ  ಭಾವನಾತ್ಮಕ ಬಂಧವನ್ನು ಹೊಂದಿರುವುದಾಗಿಯೂ ಹೇಳುವ ಮೂಲಕ ಗಾಳಿಸುದ್ದಿಗೆ ತೆರೆ ಎಳೆದರು.   ಸದ್ಯ ರಣವೀರ್​ ಅವರು  47 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಣವೀರ್ 133 ಪೋಸ್ಟ್‌ಗಳನ್ನು ಹೊಂದಿದ್ದಾರೆ.  ಅವರ ಖಾತೆಯಲ್ಲಿ ಕಾಣಿಸಿಕೊಂಡ ಕೊನೆಯ ಪೋಸ್ಟ್ ಏಪ್ರಿಲ್ 26 ರಂದು ಪೋಸ್ಟ್ ಮಾಡಲಾದ ನಟಿ ಆಲಿಯಾ ಭಟ್ ಅವರ ಜಾಹೀರಾತು. ಆದಾಗ್ಯೂ, ಅವರ ಖಾತೆಯು ಇನ್ನೂ ದಂಪತಿಗಳ ಕೆಲವು ಫೋಟೋಗಳನ್ನು ಒಳಗೊಂಡಿದೆ. ಇದೀಗ ಎಲ್ಲವೂ ಡಿಲೀಟ್​ ಆಗಿದ್ದರಿಂದ ವಿವಿಧ ರೀತಿಯಲ್ಲಿ ಸುದ್ದಿ ಹರಡಿದ್ದವು.  ಕಮಲ ಹಾಸನ್​ ವಿರುದ್ಧ ವಂಚನೆ ಆರೋಪ: ನಿರ್ಮಾಪಕರಿಂದ ದೂರು ದಾಖಲು: ಆಗಿದ್ದೇನು?  

  • ಬೇಸಿಗೆ ರಜೆಯ ಮೋಜಿಗೆ ಬೆಸ್ಟ್‌ ಟೈಂ, ಥೈಲ್ಯಾಂಡ್ ಹೋಗೋ ಪ್ರವಾಸಿಗರಿಗೆ ವೀಸಾ ಬೇಕಿಲ್ಲ!
    on May 9, 2024 at 7:10 am

    ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಮತ್ತು ಅದರ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಥೈಲ್ಯಾಂಡ್‌, ತನ್ನ ಕ್ಯಾಬಿನೆಟ್‌ನಲ್ಲಿ ಭಾರತ ಮತ್ತು ತೈವಾನ್‌ನಿಂದ ಬಂದ ಪ್ರವಾಸಿಗರಿಗೆ ವೀಸಾ ವಿನಾಯಿತಿಯನ್ನು ನೀಡಿದೆ. ನವೆಂಬರ್ 11ರ ವರೆಗೆ ಈ ರಾಷ್ಟ್ರಗಳ ಸಂದರ್ಶಕರು ವೀಸಾ ಇಲ್ಲದೆ ಥೈಲ್ಯಾಂಡ್‌ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಥೈಲ್ಯಾಂಡ್‌ನ ಪ್ರಧಾನ ಮಂತ್ರಿ ಸ್ರೆಟ್ಟಾ ಥಾವಿಸಿನ್ ಹೇಳಿದ್ದಾರೆ. ಈ ವಿಸ್ತರಣೆಯು ಪ್ರಯಾಣಿಕರಿಗೆ 30 ದಿನಗಳ ಕಾಲ ತಂಗಲು ಅನುವು ಮಾಡಿಕೊಡುತ್ತದೆ. ಅವರಿಗೆ ದೇಶದ ವೈವಿಧ್ಯಮಯ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಡುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿಯೂ ಭಾರತೀಯರಿಗೆ ವೀಸಾ ವಿನಾಯಿತಿ ನೀಡಿತ್ತು. ಇದು ಹೆಚ್ಚಿನ ಮಟ್ಟಿಗೆ ಯಶಸ್ಸಿಯಾದ ನಂತರ ಈ ಬಾರಿಯೂ ವೀಸಾ ವಿನಾಯಿತಿಯನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ, ಭಾರತೀಯ ಮತ್ತು ತೈವಾನೀಸ್ ಪ್ರವಾಸಿಗರು ವೀಸಾ-ಆನ್-ಅರೈವಲ್ ಯೋಜನೆಯಡಿಯಲ್ಲಿ 15 ದಿನಗಳ ವಾಸ್ತವ್ಯಕ್ಕೆ ಅರ್ಹರಾಗಿದ್ದರು. ಆದರೆ ಅವರು ಈಗ ವಿಸ್ತೃತ ವೀಸಾ-ಮುಕ್ತ ಪ್ರವೇಶ ಅವಧಿಯಿಂದ ಪ್ರಯೋಜನ ಪಡೆಯಲಿದ್ದಾರೆ.  IRCTC Tour Package : ಕಡಿಮೆ ದರದಲ್ಲಿ ಥೈಲ್ಯಾಂಡ್ ಪ್ರವಾಸ ಮಾಡಲು ಬಯಸಿದ್ರೆ ಇಲ್ಲಿದೆ ಆಫರ್ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ಥೈಲ್ಯಾಂಡ್, ಪ್ರವಾಸಿಗರ ಆಗಮನವನ್ನು ಉತ್ತೇಜಿಸಲು ಚೀನಾ ಮತ್ತು ರಷ್ಯಾದಂತಹ ಪ್ರಮುಖ ರಾಷ್ಟ್ರಗಳಿಂದ ಪ್ರಯಾಣಿಕರಿಗೆ ವೀಸಾ ನಿಯಮಗಳನ್ನು ಸಡಿಲಿಸುತ್ತಿದೆ. ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವಾಲಯವು 2024 ರ ಮೊದಲ ನಾಲ್ಕು ತಿಂಗಳಲ್ಲಿ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಗಮನಾರ್ಹ ಹೆಚ್ಚಳವನ್ನು ವರದಿ ಮಾಡಿದೆ. 12 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರಯ ಥೈಲ್ಯಾಂಡ್‌ಗೆ ಆಗಮಿಸಿದ್ದಾರೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 39% ಏರಿಕೆಯಾಗಿದೆ.  ಥೈಲ್ಯಾಂಡ್ ತನ್ನ ರೋಮಾಂಚಕ ಸಂಸ್ಕೃತಿ, ಬೆರಗುಗೊಳಿಸುವ ಕಡಲತೀರಗಳು ಮತ್ತು ಸುಂದರವಾದ ನಗರಗಳೊಂದಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತೀಯರಿಗೆ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬ್ಯಾಂಕಾಕ್‌ನ ಗದ್ದಲದ ಬೀದಿಗಳಿಂದ ಫುಕೆಟ್ ಮತ್ತು ಕೊಹ್ ಸಮುಯಿಯ ಪ್ರಶಾಂತ ದ್ವೀಪಗಳವರೆಗೆ, ಥೈಲ್ಯಾಂಡ್ ಪ್ರತಿ ಪ್ರಯಾಣಿಕರ ಆದ್ಯತೆಗಳನ್ನು ಪೂರೈಸುವ ವೈವಿಧ್ಯಮಯ ಅನುಭವಗಳನ್ನು ನೀಡುತ್ತದೆ. ಪ್ಲ್ಯಾಸ್ಟಿಕ್ ಬದಲಿಗೆ ಬಾಳೆಎಲೆ ಪ್ಯಾಕೇಜಿಂಗ್ ಬಳಸುತ್ತಿರೋ ವಿಯೆಟ್ನಾಂ, ಥಾಯ್ಲೆಂಡ್; ಈ ಕ್ರಮಕ್ಕೆ ನೆಟ್ಟಿಗರ ಶ್ಲಾಘನೆ ಬಜೆಟ್ ಫ್ಲೆಂಡ್ಲೀಯಾಗಿರುವ ಕಾರಣ ಥೈಲ್ಯಾಂಡ್‌, ಭಾರತೀಯರಿಗೆ ಒಂದು ನೆಚ್ಚಿನ ರಜೆಯ ತಾಣವಾಗಿದೆ. ಬಾಯಲ್ಲಿ ನೀರೂರಿಸುವ ಬೀದಿ ಆಹಾರ, ಪುರಾತನ ದೇವಾಲಯಗಳು, ಪ್ರಾಚೀನ ಕಡಲತೀರಗಳು ಥೈಲ್ಯಾಂಡ್‌ನಲ್ಲಿ ಮರೆಯಲಾಗದ ಅನುಭವವನ್ನು ನೀಡುತ್ತದೆ.

  • ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹೆಚ್ಚಿದ ಘೋಸ್ಟ್ ಮಾಲ್; ಕೋಟ್ಯಂತರ ರೂಪಾಯಿ ನಷ್ಟ
    on May 9, 2024 at 7:06 am

    ನವದೆಹಲಿ (ಮೇ 9): ದೇಶದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2022ರಿಂದ ಇಲ್ಲಿಯ ತನಕ ವರ್ಷದಿಂದ ವರ್ಷಕ್ಕೆ ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಪ್ರಮಾಣದಲ್ಲಿ ಶೇ.59ರಷ್ಟು ಏರಿಕೆಯಾಗಿದೆ. ಅಂದಹಾಗೇ ಘೋಸ್ಟ್ ಮಾಲ್ ಎಂದ ತಕ್ಷಣ ಮಾಲ್ ಗಳಲ್ಲಿ ದೆವ್ವವಿದೆ ಎಂದು ಭಾವಿಸಬೇಡಿ. ಘೋಸ್ಟ್ ಮಾಲ್ ಅಂದ್ರೆ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿರುವ ಹಾಗೂ ಜನದಟ್ಟಣೆ ಇಲ್ಲದ ಮಾಲ್ ಗಳು ಎಂದರ್ಥ. ಇವುಗಳನ್ನು ಡೆಡ್ ಮಾಲ್ ಎಂದು ಕೂಡ ಕರೆಯುತ್ತಾರೆ. ಭಾರತದ ಬಹುತೇಕ ಮೆಟ್ರೋ ನಗರಗಳ ಮಾಲ್ ಗಳಲ್ಲಿ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿದ್ದು, ಮಳಿಗೆಗಳು ಇಲ್ಲದ ಕಾರಣ ಜನಜಂಗುಳಿ ಕೂಡ ತಗ್ಗಿದೆ. ಹೊಸ ವರದಿಯೊಂದರ ಪ್ರಕಾರ ಘೋಸ್ಟ್  ಶಾಪಿಂಗ್ ಸೆಂಟರ್ ಗಳಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜನರು ಆನ್ ಲೈನ್ ಶಾಪಿಂಗ್ ನೆಚ್ಚಿಕೊಂಡಿರುವ ಕಾರಣ ಮಾಲ್ ಗೆ ಭೇಟಿ ನೀಡುವ ಅಭ್ಯಾಸವನ್ನು ಕಡಿಮೆ ಮಾಡಿರೋದು ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ ಎಂದು ಹೇಳಲಾಗಿದೆ. 2023ನೇ ಸಾಲಿನಲ್ಲಿ ದೇಶದ ಟೈರ್ 1 ನಗರಗಳಲ್ಲಿ 64 ಘೋಸ್ಟ್ ಶಾಪಿಂಗ್ ಸೆಂಟರ್ ಗಳು ಪತ್ತೆಯಾಗಿವೆ ಎಂದು ಅಂತಾರಾಷ್ಟ್ರೀಯ ಆಸ್ತಿ ಸಲಹಕಾರ ಸಂಸ್ಥೆ ನೈಟ್ ಫ್ರಾಂಕ್ ನ ಇತ್ತೀಚಿನ ವರದಿ ತಿಳಿಸಿದೆ. ಇದರಿಂದ 67 ಶತಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದೆ. ದೆಹಲಿಯಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್  ದೇಶದಲ್ಲಿ 2022ನೇ ಸಾಲಿನಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಸಂಖ್ಯೆ 57ರಷ್ಟಿತ್ತು. ಆದರೆ, 2023ನೇ ಸಾಲಿನಲ್ಲಿ ಇದು 64ಕ್ಕೆ ಏರಿಕೆಯಾಗಿದೆ ಎಂದು ನೈಟ್ ಫ್ರಾಂಕ್ ನ ವರದಿ ತಿಳಿಸಿದೆ. ಇನ್ನು ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್ ಗಳು ಪತ್ತೆಯಾಗಿವೆ. ಇಲ್ಲಿ 5.3 mn sq ft ಪ್ರದೇಶ ಬಳಕೆಯಾಗಿಲ್ಲ. ಈ ಮೂಲಕ ದೆಹಲಿಯಲ್ಲಿ ವರ್ಷದಿಂದ ವರ್ಷಕ್ಕೆ ಇಂಥ ಬಳಕೆಯಾಗದ ಅಥವಾ ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ಶೇ.58ರಷ್ಟು ಏರಿಕೆ ಕಂಡುಬಂದಿದೆ. ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇದ್ದು,  2.1 mn sq ft ಪ್ರದೇಶ ಬಳಕೆಯಾಗದೆ ಉಳಿದಿದೆ. ಮುಂಬೈನಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇ.86ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನು ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, 2.0 mn sq ft ಪ್ರದೇಶ ಬಳಕೆಯಾಗಿಲ್ಲ. ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇ.46ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನು ಘೋಸ್ಟ್ ಶಾಪಿಂಗ್ ಸೆಂಟರ್ ನಲ್ಲಿ ಇಳಿಕೆ ಕಂಡುಬಂದಿರುವ ನಗರ ಎಂದರೆ ಅದು ಹೈದರಾಬಾದ್ ಮಾತ್ರ. ಇಲ್ಲಿ  0.9 mn sq ft ಬಳಕೆಯಾಗದ ಪ್ರದೇಶವಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಹೈದರಾಬಾದ್ ನಲ್ಲಿ ಶೇ.19ರಷ್ಟು ಇಳಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿವೆ 57 ಘೋಸ್ಟ್ ಮಾಲ್ ಗಳು! ಘೋಸ್ಟ್ ಶಾಪಿಂಗ್ ಸೆಂಟರ್ ಹೆಚ್ಚಳಕ್ಕೇನು ಕಾರಣ? ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಕಡೆಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಈ ಹಿಂದಿನಂತೆ ಮಾಲ್ ಗಳಿಗೆ ಭೇಟಿ ನೀಡಿ ಖರೀದಿ ಮಾಡುವ ಅಭ್ಯಾಸ ಕಡಿಮೆಯಾಗುತ್ತಿದೆ.  ಇದರಿಂದ ಇಂದು ಮಾಲ್ ಗಳಲ್ಲಿ ಈ ಹಿಂದಿನಷ್ಟು ಜನದಟ್ಟಣೆ ಇಲ್ಲ. ಇದೇ ದೇಶದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ ಎಂದು ಹೇಳಲಾಗಿದೆ.  NRIಗಳಿಗೆ ಹೊಸ ಸೇವೆ ಪ್ರಾರಂಭಿಸಿದ ಐಸಿಐಸಿಐ ಬ್ಯಾಂಕ್; ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ 29 ನಗರಗಳಲ್ಲಿ ಸಮೀಕ್ಷೆ ನೈಟ್ ಫ್ರಾಂಕ್ ಇಂಡಿಯಾ 29 ನಗರಗಳಲ್ಲಿ ಸಮೀಕ್ಷೆ ನಡೆಸಿ ‘ಥಿಂಕ್ ಇಂಡಿಯಾ ಥಿಂಕ್ ರಿಟೇಲ್ 2024’ ವರದಿ ಸಿದ್ಧಪಡಿಸಿದೆ. ಈ ವರದಿಯಲ್ಲಿ ಟೈರ್ 2 ನಗರಗಳಲ್ಲಿನ ಮಾಲ್ ಗಳನ್ನು ಕೂಡ ಸೇರಿಸಲಾಗಿದೆ. ಲಖ್ನೋದಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್ ಪತ್ತೆಯಾಗಿದೆ. ಇಲ್ಲಿ 5.7 mn sq ft ಪ್ರದೇಶ ಬಳಕೆಯಾಗಿಲ್ಲ. ಜೈಪುರದಲ್ಲಿ2.1 mn sq ft ಕಂಡುಬಂದಿದೆ.   

  • ಅತ್ತೂ ಅತ್ತೂ ಕೊನೆಗೆ ಪಾತ್ರಕ್ಕೆ ಗುಡ್ ಬೈ ಹೇಳಿದ ಕಾವ್ಯ ಶೈವ… ಬದಲಾದ್ರು ಕೆಂಡಸಂಪಿಗೆ ನಾಯಕಿ
    on May 9, 2024 at 7:04 am

    ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಸರತ್ತು ಮಾಡಿ ಮಾಡಿ ಗೆಲುವು ಸಾಧಿಸಲು ಸಾಧ್ಯವಾಗದೇ ಅತ್ತೂ ಅತ್ತೂ ವೀಕ್ಷಕರನ್ನೇ ಸುಸ್ತು ಮಾಡಿದ್ದ ಸುಮನಾ ಪಾತ್ರ ಮಾಡುತ್ತಿದ್ದ ಕಾವ್ಯ ಶೈವ ಸೀರಿಯಲ್ ನಿಂದ ಹೊರಬಂದಿದ್ದಾರೆ.    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದವರು ಕಾವ್ಯ ಶೈವ. ಹೊಸ ಹೊಸ ತಿರುವು ಪಡೆದುಕೊಂಡ ಈ ಧಾರಾವಾಹಿ ಸದ್ಯ ರೋಚಕ ಹಂತ ತಲುಪಿತ್ತು. ಆದರೆ ಇದೀಗ ಹೊಸ ಟ್ವಿಸ್ಟ್ ಪ್ರೇಕ್ಷಕರಿಗೆ ಶಾಕ್ ನೀಡಿದೆ.    ತನ್ನ ಪ್ರೀತಿಯ ತಮ್ಮನ ಸಾವಿನ ಸೇಡು ತೀರಿಸಲು ಹೊರಟ ಸುಮನಾಳಿಗೆ ಸತ್ಯ ಏನು ಅನ್ನೋದು ಗೊತ್ತಾಗಿದೆ. ಆದರೆ ಯಾರಿಗೂ ಹೇಳದ ಪರಿಸ್ಥಿತಿ, ಪ್ರತಿಬಾರಿಯೂ ಗೆಲುವು ಸಾಧನದ್ದೆ ಆಗಿತ್ತು, ತಾನು ಅತ್ತೂ ಅತ್ತೂ ವೀಕ್ಷಕರನ್ನು ಅಳುವಂತೆ ಮಾಡಿದ ಸುಮನಾ ಪಾತ್ರಧಾರಿ ಕಾವ್ಯ ಶೈವ (Kavya Shaiva) ಇದೀಗ ಸತ್ಯವನ್ನು ಬಹಿರಂಗ ಮಾಡೋ ಮೊದಲೇ ಸೀರಿಯಲ್ ಪಾತ್ರದಿಂದ ಹೊರ ಬಂದಿದ್ದಾರೆ.  ಕಾವ್ಯಾ ಶೈವ ಯಾಕಾಗಿ ಈ ಪಾತ್ರದಿಂದ ಹೊರ ಬಂದಿದ್ದಾರೆ ಅನ್ನೋ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಈಗಾಗಲೇ ಆ ಪಾತ್ರಕ್ಕೆ ಹೊಸ ಪಾತ್ರಧಾರಿ ಕೂಡ ಬಂದಾಗಿದೆ. ಈಗಾಗಲೇ ಶೂಟಿಂಗ್ ಆರಂಭವಾಗಿಯೂ ಆಗಿದೆ. ಆದರೆ ಇನ್ನಷ್ಟೆ ವೀಕ್ಷಕರಿಗೆ ಹೊಸ ಪಾತ್ರಧಾರಿಯ ಪರಿಚಯ ಆಗಬೇಕಿದೆ.    ಸದ್ಯ ಸೀರಿಯಲ್ ನಲ್ಲಿ ಸುಮನಾ ಅವರ ಕಿಡ್ನಾಪ್ ಆಗಿದೆ, ಹಾಗಾಗಿ ಹಲವು ದಿನಗಳಿಂದ ಸುಮನಾ ಅವರ ಹುಡುಕಾಟವೇ ನಡೆಯುತ್ತಿದೆ. ಇದರ ಮಧ್ಯೆ ಸಾಧನಾ ತಾನೇ ಸುಮನಾ ಕೊಲೆ ಮಾಡಿರೋದಾಗಿ ಕೂಡ ಹೇಳಿದ್ದಾಳೆ. ಆದರೆ ಈ ಕಿಡ್ನಾಪ್ ಟ್ವಿಸ್ಟ್ ಗೆ ಕಾರಣ ಸುಮನಾ ಪಾತ್ರದ ಬದಲಾವಣೆ.    ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದ ಕಾವ್ಯ ಶೈವ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಪಾತ್ರದಿಂದ ಹೊರ ಬರುವ ಬಗ್ಗೆ ಕ್ಲೂ ನೀಡಿದ್ದರು. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಮನಾ ಪಾತ್ರವನ್ನು ನಾನು ಇಷ್ಟಪಟ್ಟು ನಿರ್ವಹಿಸುತ್ತಿದ್ದೆ. ಧನ್ಯವಾದಗಳು ಎಂದಿದ್ದಾರೆ.    ಅಷ್ಟೇ ಅಲ್ಲ ‘ನಾನು ಇದಕ್ಕಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಇವತ್ತು ನಾನು ಪಡೆದುಕೊಂಡಿರುವ ಪ್ರೀತಿಗಿಂತ ಮತ್ತಷ್ಟು ಹೆಚ್ಚು ಪ್ರೀತಿ ಪಡೆಯುವ ಭರವಸೆ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಹ ನಟರು ಸಹ ಕಾಮೆಂಟ್ ಮಾಡಿದ್ದು, ವಿ ವಿಲ್ ಮಿಸ್ ಯೂ ಎಂದು ಬರೆದಿದ್ದಾರೆ.    ಇನ್ನು ಈಗಾಗಲೇ ಸೀರಿಯಲ್ ನ ಟೈಟಲ್ ಕಾರ್ಡ್ ಬದಲಾಗಿದ್ದು, ಸುಮನಾ ಪಾತ್ರದಲ್ಲಿ ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನು ಗೂಡು ಸೀರಿಯಲ್ ನಲ್ಲಿ ಪ್ರಾಚಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಈಗ ಸುಮನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರನ್ನು ಜನ ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.   

  • ಒಕ್ಕಲಿಗರ ಒಡ್ಡೋಲಗದಲ್ಲಿ ಶುರುವಾಗಿದೆ ರಾಜಕೀಯ ಚದುರಂಗದಾಟ..!
    on May 9, 2024 at 7:02 am

    ಬೆಂಗಳೂರು(ಮೇ.09):  ಮಗನ ಎಡವಟ್ಟಿಗೆ ಅಪ್ಪನಿಗೆ ಜೈಲು ಶಿಕ್ಷೆಯಾಗಿದೆ. ಮಗನನ್ನು ಬಚಾವ್ ಮಾಡಲು ಹೋಗಿ ಎಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಪ್ರಜ್ವಲ್ ಪೆನ್’ಡ್ರೈವ್ ಪುರಾಣದಲ್ಲಿ ಎದ್ದು ನಿಂತ ಒಕ್ಕಲಿಗ ದಂಗಲ್..! ಒಕ್ಕಲಿಗರ ಒಡ್ಡೋಲಗದಲ್ಲಿ ಶುರುವಾಗಿದೆ ರಾಜಕೀಯದಾಟ..! ಡಿಕೆ ಶಿವಕುಮಾರ್ ವಿರುದ್ಧ ರೊಚ್ಚಿಗೆದ್ದ ದಳಪತಿಗಳ ಕಿಚ್ಚಿನ ಕಾಳಗ..! ಬಂಡೆ ವಿರುದ್ಧ ಮತ್ತೆ ಕೆರಳಿ ಕೆಂಡವಾದ ಕುಮಾರಸ್ವಾಮಿ..! ಡಿಕೆ ಬೆನ್ನಿಗೆ ನಿಂತ ಕೈ ಸರ್ಕಾರದ ಒಕ್ಕಲಿಗ ಮಂತ್ರಿಗಳು..! ಇವ್ನೇನು ಲಾಯರಾ, ಜಡ್ಜಾ ಅಂತ ದಳಪತಿಗೆ ಡಿಚ್ಚಿ ಕೊಟ್ಟದ್ದೇಕೆ ಡಿಕೆ ಸಾಹೇಬ..? ಎಷ್ಟೇ ಜನ ಬಂದರೂ ಏಕಾಂಗಿಯಾಗಿ ಎದುರಿಸ್ತೇನೆ ಅಂತ ಅಬ್ಬರಿಸಿದ್ದೇಕೆ ದಳಪತಿ ಎಚ್ಡಿಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಪೆನ್’ಡ್ರೈವ್ ಕುರುಕ್ಷೇತ್ರ. ಕುಮಾರಸ್ವಾಮಿ ಬ್ಲಾಕ್’ಮೇಲರ್, ಕಿಂಗ್ ಆಫ್ ಬ್ಲಾಕ್’ಮೇಲ್ ಅಂತ ದಳಪತಿಗೆ ಡಿಚ್ಚಿ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಇತ್ತ ಡಿಕೆಶಿ ವಿರುದ್ಧ ದಳಪತಿಗಳು ಬೀದಿ ಕಾಳಗಕ್ಕೆ ಇಳಿದಿದ್ದಾರೆ.  ಪ್ರಜ್ವಲ್ ಪೆನ್’ಡ್ರೈವ್ ಪ್ರಕರಣ ಯಾವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ದಿನಕ್ಕೊಂದು ಟ್ವಿಸ್ಟ್, ಕ್ಷಣಕ್ಕೊಂದು ತಿರುವು. ಮೊದ್ಲು ವೀಡಿಯೊ ಬಾಂಬ್ ಸ್ಫೋಟ, ನಂತ್ರ ವೀಡಿಯೊ ವೈರಲ್ ಮಾಡಿದವರು ಯಾರು ಅನ್ನೋ ಹುಡುಕಾಟ.. ಇದ್ರ ಮಧ್ಯೆ ರಾಜಕೀಯದಾಟ. ರಾಜಕೀಯ ಕೆಸರೆರಚಾಟದ ಮಧ್ಯೆ ಒಕ್ಕಲಿಗ ಕೋಟೆಯಲ್ಲಿ ದಳಪತಿಗಳ ಭಾರೀ ಪ್ರತಿಭಟನೆ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಚ್ಚು. ಅಷ್ಟಕ್ಕೂ ಒಕ್ಕಲಿಗ ಕಾರಿಡಾರ್’ನಲ್ಲೇ ದಳಪತಿಗಳು ರೊಚ್ಚಿಗೆದ್ದದ್ದು ಯಾಕೆ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ. News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ! ಇದು ಪೆನ್’ಡ್ರೈವ್ ಕುರುಕ್ಷೇತ್ರ.. ಇಲ್ಲಿ ಒಬ್ಬರದ್ದು ಅಟ್ಯಾಕ್, ಇನ್ನೊಬ್ಬರದ್ದು ಅಟ್ಯಾಕ್’ಗೆ ಕೌಂಟರ್. ಸಂಸದ ಪ್ರಜ್ವಲ್ ರೇವಣ್ಣನ ಪೆನ್’ಡ್ರೈವ್ ಪ್ರಕರಣದ ರೂವಾರಿ, ಸೂತ್ರಧಾರ ಕಾಂಗ್ರೆಸ್ ಸರ್ಕಾರ ಅನ್ನೋದು ಜೆಡಿಎಸ್ ಆರೋಪ. ಇಡೀ ಪ್ರಕರಣದ ಹಿಂದಿರೋ ವ್ಯಕ್ತಿ ಡಿಸಿಎಂ ಡಿಕೆ ಶಿವಕುಮಾರ್ ಅಂತ ದಳಪತಿಗಳು ಆರೋಪಿಸ್ತಾ ಇದ್ದಾರೆ. ಇದೇ ವಿಚಾರ . ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಧ್ಯೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. 

  • ಸಂದೇಶಖಾಲಿ ಪ್ರಕರಣದಲ್ಲಿ ಮೆಘಾ ಟ್ವಿಸ್ಟ್, ಟಿಎಂಸಿ ನಾಯಕನ ವಿರುದ್ದ ದೂರು ಹಿಂಪಡೆದ ಸಂತ್ರಸ್ತೆ!
    on May 9, 2024 at 7:00 am

    ಸಂದೇಶ್‌ಖಾಲಿ(ಮೇ.09) ಮಹಿಳೆ ಮೇಲೆ ಅತ್ಯಾಚಾರ ಹಾಗೂ ಭೂಕಬಳಿಕೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇತ್ತ ಮಮತಾ ಬ್ಯಾನರ್ಜಿ ಸರ್ಕಾರ ಕಾನೂನು ಹೋರಾಟವನ್ನೂ ತೀವ್ರಗೊಳಿಸಿದೆ. ಈ ಬೆಳವಣಿಗೆ ನಡುವೆ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಟಿಎಂಸಿ ಸದ್ಯಸನ ವಿರುದ್ದ ಮಹಿಳೆ ನೀಡಿದ್ದ ಅತ್ಯಾಚಾರ ದೂರನ್ನು ಹಿಂಪಡೆಯಲಾಗಿದೆ. ಇಷ್ಟೇ ಅಲ್ಲ ಬಿಜೆಪಿ ಒತ್ತಾಯಪೂರ್ವಕವಾಗಿ ನನ್ನಿಂದ ದೂರು ಕೊಡಿಸಿದೆ. ಟಿಎಂಸಿ ಕಚೇರಿಯಲ್ಲಿ ನನ್ನ ಮೇಲೆ ಯಾವುದೇ ಲೈಂಗಿಕ ಅತ್ಯಾಚಾರ ನಡೆದಿಲ್ಲ ಎಂದು ಮಹಿಳೆ ಹೇಳಿರುವುದು ಇದೀಗ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ನಾಯಕರು ನನ್ನ ಬಳಿ ಬಂದು ಪ್ರಧಾನ ಮಂತ್ರಿ ಅವಾಸ್ ಯೋಜನೆ ಸೌಲಭ್ಯಕ್ಕಾಗಿ ಕಾಲಿ ಪುಟದಲ್ಲಿ ಸಹಿ ಮಾಡಿಸಿಕೊಂಡು ಹೋಗಿದ್ದರು. ಬಳಿಕ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಕರೆಯಿಸಿ ನನ್ನ ಸಹಿ ಇರುವ ಪುಟದಲ್ಲಿ ಟಿಎಂಸಿ ಸದಸ್ಯನ ವಿರುದ್ದ ಅತ್ಯಾಚಾರ ದೂರು ಕೊಡಿಸಿದ್ದಾರೆ. ಟಿಎಂಸಿ ಕಚೇರಿಗೆ ನಾನು ತಡ ರಾತ್ರಿ ಹೋಗಿಲ್ಲ, ಆ ರೀತಿಯ ಅನಿವಾರ್ಯತೆ ಎದುರಾಗಿಲ್ಲ. ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಹಿಳೆ ದೂರು ಹಿಂಪಡು ಹೇಳಿದ್ದಾಳೆ. ಸಂದೇಶ್‌ಖಾಲಿ: ಶೇಖ್‌ ಆಪ್ತನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಸಂದೇಶ್‌ಖಾಲಿ ಪ್ರಕರಣದ ಕುರಿತು ವಿಡಿಯೋ ಕುಟುಕು ಕಾರ್ಯಾಚರಣೆ ಬಹಿರಂಗವಾದ ಬೆನ್ನಲ್ಲೇ ಇದೀಗ ಮಹಿಳೆ ದೂರು ವಾಪಸ್ ಪಡೆದಿರುವುದು ಟಿಎಂಸಿ ಹೋರಾಟಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.  ವಿಡಿಯೋ ಸ್ಟಿಂಗ್‌ನಲ್ಲಿ ಬಿಜೆಪಿ ಮಂಡಲ ನಾಯಕ ಗಂಗಾಧರ್ ಕೋಯಲ್ ಸಂದೇಶ್‌ಖಾಲಿ ಪ್ರಕರಣದ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಮಹಿಳೆಯರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಇದು ಕಪೋಕಲ್ಪಿತ, ಅತ್ಯಾಚಾರ ಎಂದು ಬಿಂಬಿಸಲಾಗಿದೆ. ಬಂಗಾಳ ವಿಧಾನಸಭೆ ವಿಪಕ್ಷ ನಾಯಕ ಸುವೆಂಧು ಅಧಿಕಾರಿ ಇದರ ರೂವಾರಿ ಎಂದು ಗಂಗಾಧರ್ ಕೋಯಲ್ ಹೇಳಿದ್ದಾರೆ. ಈ ವಿಡಿಯೋ ಸ್ಟಿಂಗ್ ಬಯಲಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಇದೀಗ ಅತ್ಯಾಚಾರ ಸಂತ್ರಸ್ತೆ ನೀಡಿದ್ದ ದೂರು ಕೂಡ ವಾಪಸ್ ಪಡೆಯಲಾಗಿದೆ. ಇದೀಗ ಟಿಎಂಸಿ ನಾಯಕರು ಬಿಜೆಪಿ ವಿರುದ್ದ ಮುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಟಿಎಂಸಿ ಹೆಸರು ಕೆಡಿಸಲು ಈ ಷಡ್ಯಂತ್ರ ಮಾಡಲಾಗಿದೆ. ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳನ್ನು ದಾಖಲಿಸಿ ಪ್ರಕರಣ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹೆಂಡ್ತಿ ಮಗಳನ್ನು ನೋಡಿ ಮಗುವಿನಂತೆ ಅತ್ತ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಶೇಖ್ ಶಹಜಾಹಾನ್ ಸಂದೇಶ್‌ಖಾಲಿ ಪ್ರಕರಣ ಇದೀಗ ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದೆಡೆ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಶಾಜಹಾನ್‌ ಶೇಖ್‌ ವಿರುದ್ಧ ಹಲಲವು ಆರೋಪಗಳು ಕೇಳಿಬಂದಿದೆ. ಇತ್ತ ಶಾಜಹಾನ್‌ ಶೇಖ್‌ ಆಪ್ತ ಸಂಬಂಧಿ ಮೇಲೆ ಸಿಬಿಐ ದಾಳಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು.   

  • ಬಿಜೆಪಿ ಅಧಿಕಾರದಲ್ಲಿ ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳ ಚೇತರಿಕೆ: ನಿರ್ಮಲಾ ಸೀತಾರಾಮನ್
    on May 9, 2024 at 6:55 am

    ನವದೆಹಲಿ (ಮೇ.09): ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳನ್ನು ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷಿಸಿದ್ದು, ನಮ್ಮ ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಅವುಗಳು ಚೇತರಿಕೆ ಕಂಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳು ಹೀನಾಯಸ್ಥಿತಿಗೆ ತಲುಪಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಆರೋಪಿಸಿದ ಬೆನ್ನಲ್ಲೇ ಅದಕ್ಕೆ ಉತ್ತರ ನೀಡಿದ್ದಾರೆ. ಸರ್ಕಾರಿ ಸ್ವಾಯತ್ತೆ ಸಂಸ್ಥೆಯಾದ ಹಿಂದೂಸ್ತಾನ್‌ ಏರೋನಾಟಿಕ್‌ ಲಿಮಿಟೆಡ್‌ (ಎಚ್‌ಎಎಲ್‌) ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಿರ್ಲಕ್ಷಿಸಿದ್ದರು.  ಆದರೆ ಮೋದಿ ಅಧಿಕಾರದಲ್ಲಿ ಇವುಗಳೆಲ್ಲವು ಚೇತರಿಕಂಡಿವೆ ಎಂದು ನಿರ್ಮಲಾ ಹೇಳಿದ್ದಾರೆ. 4 ವರ್ಷದಲ್ಲಿ ಎಚ್‌ಎಲ್‌ನ ಮಾರುಕಟ್ಟೆ ಮೌಲ್ಯ ಶೇ. 1370 ರಷ್ಟು ಏರಿಕೆ ಕಂಡಿದೆ. ಅದರಲ್ಲೂ 2020ರಲ್ಲಿ ಅದರ ಆದಾಯ 17,398 ಕೋಟಿ ರು. ನಷ್ಟಿದ್ದು, 2024ರಲ್ಲಿ 2.5 ಲಕ್ಷ ಕೋಟಿ ರು. ಗೆ ಏರಿಕೆ ಕಂಡಿದೆ. 2023-24ರ ಆರ್ಥಿಕ ವರ್ಷದಲ್ಲಿ ಎಚ್‌ಎಎಲ್‌ ಸುಮಾರು 29,810 ಕೋಟಿ ರು. ಅತ್ಯಧಿಕ ಆದಾಯವನ್ನು ಗಳಿಸಿದೆ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಪ್ರಮುಖವಾಗಿ ಭಾರತವನ್ನು ಇಂದು ಶಸ್ತ್ರಾಸ್ತ್ರಗಳ ರಫ್ತು ಮಾಡುವ ದೇಶವನ್ನಾಗಿ ಬದಲಾಯಿಸಿದೆ ಎಂದು ಹೇಳಿದ್ದಾರೆ.  ಭಾರತ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ: ಅಮೆರಿಕ ಉದ್ಯಮಿ ಪ್ರಜ್ವಲ್‌ ವಿರುದ್ಧ ಸಿದ್ದು ಸರ್ಕಾರ ಕ್ರಮ ಕೈಗೊಂಡಿಲ್ಲ: ಕರ್ನಾಟಕದ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಗೊತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾಂಗ್ರೆಸ್‌ ಸರ್ಕಾರ ಒಕ್ಕಲಿಗ ಮತಗಳನ್ನು ಕಳೆದುಕೊಳ್ಳಬಹುದೆಂಬ ಭಯದಲ್ಲಿ ಲೋಕಸಭೆ ಚುನಾವಣೆಯ ಕರ್ನಾಟಕದ ಮೊದಲ ಹಂತದ ಚುನಾವಣೆ ಮುಗಿಯುವವರೆಗೂ ಮೌನ ವಹಿಸಿದೆ. ಆದರೆ ಈಗ ಅದನ್ನೇ ದೊಡ್ಡ ಸುದ್ದಿ ಎಂಬಂತೆ ಬಿಂಬಿಸುತ್ತಿದೆ. ಇದು ಅವರ ಬೂಟಾಟಿಕೆಯನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.

  • ಪೇರೆಂಟಿಂಗ್ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದೇನು? ಇಂದಿನ ಕಾಲಕ್ಕೆ ಈ ಅಡ್ವೈಸ್‌ ಸೂಕ್ತವೇ?
    on May 9, 2024 at 6:52 am

    ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ (Vijay Raghavendra) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಪೇರೆಂಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಇವತ್ತಿನ ಮಕ್ಕಳನ್ನು ಹ್ಯಾಂಡಲ್‌ ಮಾಡೋದು ಅಷ್ಟು ಸುಲಭವಲ್ಲ. ಯಾಕಂದ್ರೆ, ಇವತ್ತು ಸೋಷಿಯಲ್ ಮೀಡಿಯಾ ಹಾಗೂ ಇಂಟರ್‌ನೆಟ್ ಮೂಲಕ ಬಹಳಷ್ಟು ಮಾಹಿತಿಗಳು ಪ್ರತಿಯೊಬ್ಬರ ಕೈನಲ್ಲೇ ಇರುವ ಮೊಬೈಲ್‌ ಮೂಲಕ ಸಿಗ್ತಾನೇ ಇರ್ತಾವೆ. ಮೊದಲಿನಂತೆ ಕನ್ವೆನ್ಷನಲ್ ವೇ ದಲ್ಲಿ ಹ್ಯಾಂಡಲ್‌ ಮಾಡೋದು ಬೆಟರ್ ಅಂತ ನಾನು ಎಲ್ಲ ಪೇರೆಂಟ್ಸ್‌ಗೆ ಹೇಳೋಕೆ ಇಷ್ಟ ಪಡ್ತೀನಿ.  ನಾನು ನಿನ್ನಪ್ಪ, ನಾನು ನಿನ್ನ ಅಮ್ಮ, ಹೇಳ್ತಾ ಇದೀನಿ ಕೇಳು, ನಿನ್ನ ಒಳ್ಳೇದಕ್ಕೇ ಹೇಳ್ತಾ ಇದೀನಿ.. ಅನ್ನೋ ರೀತಿನೇ ಸರಿ. ಆದರೆ, ಹೇಳೋದಕ್ಕೆ ಒಂದು ಸರಿಯಾದ ವೇ ಇದೆ, ಹಾಗೇ ಹೇಳ್ಬೇಕು. ಮಕ್ಕಳಿಗಾಗಿಯೇ ಇರಿ, ಅವರ ಬಗ್ಗೆಯೇ ಎಲ್ಲ ಕಾಳಜಿ ಇರಲಿ, ಅವರಿಗಾಗಿ ನೀವು ಸಾಕಷ್ಟು ಸಮಯ ಕೊಡಿ, ಅವರಿಗೆ ಬೇಕಾಗಿರುವುದು ನಿಮ್ಮ ಜತೆಗೆ ಅವರು ಇರಬೇಕಾದ ಸಮಯ. ಯಾವಾಗ ಅವರಿಗೆ ನೀವು ಸಮಯ ಕೊಡಲ್ಲ, ಅವರಿಗೆ ನಿಮ್ಮ ಅಗತ್ಯವಿದ್ದಾಗ ನೀವು ಅವರಿಗೆ ನಿಮ್ಮ ಸಮಯ ಕೊಡಲ್ಲ, ಆಗ ಅವ್ರು ಬೇರೆ ಕಡೆ ಹೋಗ್ತಾರೆ’ ಎಂದಿದ್ದಾರೆ ನಟ ವಿಜಯರಾಘವೇಂದ್ರ.  ನಾಲ್ಕು ತಾಸಿಗಿಂತ ಹೆಚ್ಚಿನ ನಿದ್ದೆ ಟೈಂ ವೇಸ್ಟ್ ಅಂದ್ರು ಸಿಹಿಕಹಿ ಚಂದ್ರು; ನೆಟ್ಟಿಗರಿಂದ ಶುರುವಾಯ್ತು ಪಾಠ! ಬಹುತೇಕರಿಗೆ ತಿಳಿದಿರುವಂತೆ, ನಟ ವಿಜಯರಾಘವೇಂದ್ರ ಅವರು ಈಗ ಸಿಂಗಲ್ ಪೇರೆಂಟ್. ಅವರೇ ಮಗನಿಗೆ ಅಪ್ಪಅಮ್ಮ ಎರಡೂ ಆಗಿ ನೋಡಿಕೊಳ್ಳಬೇಕು. ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಕಳೆದ ವರ್ಷ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಹೀಗಾಗಿ ನಟ ವಿಜಯ್ ರಾಘವೇಂದ್ರ ಅವರೀಗ ಒಬ್ಬಂಟಿ ಪೋಷಕರು. ಹೀಗಾಗಿಯೇ ಅವರಿಗೆ ಅಂಥ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಕೂಡ ಮಾರ್ಮಿಕವಾಗಿದೆ ಎನ್ನಬಹುದು. ನಟ ವಿಜಯರಾಘವೇಂದ್ರ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ ಇನ್ನು, ನಟ ವಿಜಯರಾಘವಂದ್ರ ಪತ್ನಿ ಸ್ಪಂದನಾ ಅವರು ತಮ್ಮ ಸ್ನೇಹಿತೆಯರೊಟ್ಟಿಗೆ ಬ್ಯಾಂಕಾಕ್ (Bangkok)ಹೋಗಿದ್ದಾಗ ಅವರಿಗೆ ಹೃದಯ ಸ್ತಂಭನವಾಗಿ ಅವರು ಅಸು ನೀಗಿದ್ದಾರೆ. 7 ಆಗಷ್ಟ್ 2023ರಂದು (7 August 2023) ಥೈಲ್ಯಾಂಡ್‌ನ (Thailand)ಬ್ಯಾಂಕಾಕ್‌ನಲ್ಲಿದ್ದಾಗ ಈ ದುರಂಥ ಸಂಭವಿಸಿದ್ದು ಅವರು ಪತಿ ವಿಜಯರಾಘವೇಂದ್ರ ಹಾಗೂ ಮಗನನ್ನು ಅಗಲಿದ್ದಾರೆ. ತುಂಬಾ ಅನ್ಯೋನ್ಯವಾಗಿದ್ದ ನಟ ವಿಜಯ್ ರಾಘವೇಂದ್ರ ಹಾಗು ಪತ್ನಿ ಸ್ಪಂದನಾರ ಬಾಳಿನಲ್ಲಿ ಇಂಥ ದುರಂಥ ಸಂಭವಿಸಿದ್ದಕ್ಕೆ ಇಡೀ ಕರುನಾಡು ಮರುಗಿದೆ. 

  • ಹತ್ತೇ ವರ್ಷದಲ್ಲಿ ಗೋ ಸಂತತಿ ಶೇ.40 ಇಳಿಕೆ..!
    on May 9, 2024 at 6:47 am

    ಸಂದೀಪ್ ವಾಗ್ಲೆ ಮಂಗಳೂರು(ಮೇ.09):  ದಶಕದ ಹಿಂದೆ ಕರಾವಳಿಯ ಗ್ರಾಮಾಂತರದಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ದನ- ಕರುಗಳು ಈಗ ಕಾಣಸಿಗುವುದೇ ಅಪರೂಪ. ಯಾಕೆಂದರೆ ಹತ್ತೇ ವರ್ಷಗಳಲ್ಲಿ ದ.ಕ. ಜಿಲ್ಲೆಯ ಗೋ ಸಂತತಿ ಶೇ.40ಕ್ಕೂ ಅಧಿಕ ಕ್ಷೀಣಿಸಿದೆ! ಹೌದು. ಕರಾವಳಿ ಜಿಲ್ಲೆಯಲ್ಲೀಗ ಗೋವು ಸಾಕುವ ಆಸಕ್ತಿ ಗಣನೀಯವಾಗಿ ತಗ್ಗಿದೆ. ಆದರೆ ಗೋ ಹೆಸರಿನ ರಾಜಕಾರಣ ಮಾತ್ರ ಹೆಚ್ಚಾಗುತ್ತಲೇ ಇದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಪ್ರತಿ 5 ವರ್ಷಗಳಿಗೊಮ್ಮೆ ಜಾನುವಾರು ಗಣತಿ ಮಾಡುತ್ತದೆ. ಅದರ ಅಂಕಿ ಅಂಶಗಳ ಪ್ರಕಾರ ದ.ಕ. ಜಿಲ್ಲೆಯಲ್ಲಿ 2007ರಲ್ಲಿದ್ದ ಜಾನುವಾರು (ಹಸು, ಎಮ್ಮೆಗಳ ಸಂಖ್ಯೆ 2019ರ ವೇಳೆಗೆ ಶೇ.40ರಷ್ಟು ಕುಸಿದಿದೆ. 2019ರಿಂದೀಚೆಗೆ (ಹೊಸ ಗಣತಿ ಇನ್ನಷ್ಟೇ ಆಗಬೇಕಿದೆ) ಈ ಸಂಖ್ಯೆ ಇನ್ನಷ್ಟು ಕುಸಿದಿರುವ ಸಾಧ್ಯತೆಯನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ. ಕೊರೋನಾ ಬಳಿಕ ಲಕ್ಷದ್ವೀಪದ ಪ್ರಥಮ ಪ್ರಯಾಣಿಕರ ಹಡಗು ಮಂಗಳೂರಿಗೆ ಗೋ ಸಂತತಿ ಎಷ್ಟಿತ್ತು, ಎಷ್ಟಿದೆ?: 2007ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯ ಹಾಗೂ ಮಿಶ್ರತಳಿ ದನಗಳು, ಎಮ್ಮೆ ಸೇರಿ 4,11,728 ಜಾನುವಾರುಗಳಿದ್ದವು. 2012ರ ಗಣತಿಯಂತೆ ಈ ಸಂಖ್ಯೆ 2,57,415ಕ್ಕೆ ಇಳಿದಿದೆ. 2019ರಲ್ಲಿ ನಡೆದ ಕೊನೆಯ ಗಣತಿಯ ಪ್ರಕಾರ 2,52,401 ಮಾತ್ರ ಜಾನುವಾರುಗಳಿವೆ. ಈ ವರ್ಷ ಹೊಸ ಗಣತಿ ಆಗಬೇಕಿದ್ದು, ಪ್ರಸ್ತುತ ಸ್ಥಿತಿಗತಿ ಇನ್ನಷ್ಟೇ ಗೊತ್ತಾಗಬೇಕಿದೆ. ಅಳಿವಿನಂಚಿಗೆ ಸ್ಥಳೀಯ ಗೋತಳಿ!: ಇನ್ನು, ತಲೆತಲಾಂತರಗಳಿಂದ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ, ಆರೋಗ್ಯಯುತ ಜೀವನ ಶೈಲಿಗೆ ಕಾರಣವಾಗಿದ್ದ ಊರಿನ ತಳಿಯ ಗೋವುಗಳು ವಿನಾಶದ ಅಂಚಿಗೆ ತಳ್ಳಲ್ಪಟ್ಟಿರುರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. 15 ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಶೇ.70ರಷ್ಟು ಸ್ಥಳೀಯ ಗೋತಳಿ ನಶಿಸಿಹೋಗಿದೆ. ಇವುಗಳ ಜಾಗವನ್ನು ಮಿಶ್ರತಳಿ ಹಸುಗಳು ಆಕ್ರಮಿಸಿವೆ, ಅದೂ ನಿರೀಕ್ಷೆಯ ಸಂಖ್ಯೆಯಲ್ಲಿಲ್ಲ. 2007ರಲ್ಲಿ ಊರಿನ ತಳಿಯ ಗೋವುಗಳು 2,29,838 ಇದ್ದರೆ, 2012ರಲ್ಲಿ 1,13,747ಕ್ಕೆ ಇಳಿದಿತ್ತು. 2019ರಲ್ಲಿ ಈ ಸಂಖ್ಯೆ ಬರೋಬ್ಬರಿ 65,997ಕ್ಕೆ ಕುಸಿದಿದೆ! ಮಿಶ್ರತಳಿಯ ಗೋವುಗಳು 2007ರಲ್ಲಿ 1,66,771 ಇದ್ದರೆ, 2019ರಲ್ಲಿ 1,84,572ಕ್ಕೆ ಏರಿಕೆಯಾಗಿವೆ. ಉಳಿದಂತೆ ಎಮ್ಮೆಗಳು 2007ರಲ್ಲಿ 15,119 ಇದ್ದರೆ, 2012ರಲ್ಲಿ 3700, 2019ರಲ್ಲಿ 1832 ಇದ್ದವು. ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ? ಯುವಕರಲ್ಲಿಲ್ಲ ಗೋ ಸಾಕಣೆ ಆಸಕ್ತಿ: ಗೋ ಸಂತತಿ ತೀವ್ರ ಇಳಿಮುಖವಾಗುತ್ತಿರುವ ಕುರಿತು ‘ಕನ್ನಡಪ್ರಭ’ದೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ, ಪ್ರಸ್ತುತ ಹಿಂದಿನ ತಲೆಮಾರಿನವರು ಮಾತ್ರ ಗೋ ಸಾಕಣೆಯಲ್ಲಿ ತೊಡಗಿದ್ದಾರೆ. ಯುವ ಜನಾಂಗ ಹೈನುಗಾರಿಕೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ. ಜತೆಗೆ ಕಾರ್ಮಿಕರ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಸಣ್ಣ ಸಣ್ಣ ಹಿಡುವಳಿಗಳ ಕಾರಣದಿಂದ ಜಾನುವಾರು ಸಾಕಣೆಗೆ ಅವಕಾಶ ಕಡಿಮೆಯಾಗಿದೆ. ಮುಖ್ಯವಾಗಿ ಕಳೆದ 10 ವರ್ಷಗಳಲ್ಲಿ ಬತ್ತ ಬೇಸಾಯ 45 ಸಾವಿರ ಹೆಕ್ಟೇರ್‌ನಿಂದ 9 ಸಾವಿರ ಹೆ.ಗೆ ಇಳಿದಿದೆ. ವಾಣಿಜ್ಯ, ತೋಟಗಾರಿಕೆ ಬೆಳೆಗಳು ಜಾಸ್ತಿಯಾಗುತ್ತಿರುವುದೂ ಗೋ ಸಂತತಿ ಇಳಿಮುಖವಾಗಲು ಕಾರಣ ಎಂದು ಹೇಳುತ್ತಾರೆ. ‘ಊರಿನ ತಳಿಯ ದನಗಳು ಲಾಭದಾಯಕ ಅಲ್ಲ ಎನ್ನುವ ಕಾರಣ ಒಂದೆಡೆಯಾದರೆ, ಈ ತಳಿಯ ಹಸುಗಳನ್ನು ಸಾಕಲು ವಿಶಾಲ ಜಾಗದ ಕೊರತೆಯೂ ಸ್ಥಳೀಯ ತಳಿಯ ಹಸುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿರಬಹುದು’ ಎಂದೂ ಡಾ.ಅರುಣ್‌ ಅಭಿಪ್ರಾಯಪಡುತ್ತಾರೆ. ಈಗಿನ ಯುವ ಜನಾಂಗ ಗೋ ಸಾಕಣೆಯಲ್ಲಿ ಆಸಕ್ತಿ ವಹಿಸದಿರುವುದು ಗೋವಿನ ಸಂತತಿ ಇಳಿಮುಖವಾಗಲು ಮುಖ್ಯ ಕಾರಣ. ಜತೆಗೆ ಕಾರ್ಮಿಕರ ಕೊರತೆ, ಸಣ್ಣ ಹಿಡುವಳಿಗಳು, ಕೃಷಿಭೂಮಿ ಕಡಿಮೆಯಾಗುತ್ತಿರುವುದು ಕೂಡ ಕಾರಣ ಆಗಿರಬಹುದು ಎಂದು ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

  • ಬಂಟ್ವಾಳ: ನೀರಿಲ್ಲದೆ ಕೃಷಿ ನಾಶ, ಮನನೊಂದು ರೈತ ಆತ್ಮಹತ್ಯೆ
    on May 9, 2024 at 6:34 am

    ಬಂಟ್ವಾಳ(ಮೇ.09):  ನೀರಿನ‌ ಸಮಸ್ಯೆಯಿಂದ ಕೃಷಿ ನಾಶವಾಗಿದ್ದು, ಇದರಿಂದ ಮನನೊಂದ ಕೃಷಿಕರೊಬ್ಬರು ಕುಡಿಯಲು ನೀರು ಸೇದುವ ಬಾವಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ವೇಳೆ ನಡೆದಿದೆ. ಪುತ್ತೂರು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ (53) ಆತ್ಮಹತ್ಯೆ ಮಾಡಿದವರು. ಭಾಸ್ಕರ್ ರೈ ಅವರು ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಪತ್ನಿಯ ತಮ್ಮನ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಸ್ಕರ್ ರೈ ಅವರು ಪುತ್ತೂರಿನ ಕೆದಂಬಾಡಿ ಗ್ರಾಮದಲ್ಲಿ ವಾಸವಾಗಿದ್ದು, ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೆಲಪಾಡಿಯಿಂದ ಮದುವೆಯಾಗಿದ್ದರು‌. ಕೃಷಿಯನ್ನು ನಂಬಿ ಬದುಕುತ್ತಿದ್ದ ಇವರಿಗೆ ಇತ್ತೀಚಿನ ದಿನಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಉಂಟಾಗಿ ಕೃಷಿಗೆ ಹಾನಿಯಾಗಿತ್ತು. ದಾಬಸ್‌ಪೇಟೆ: ಫೋನ್ ಬಳಸಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ ಕೃಷಿಯೇ ಮೂಲಾಧಾರವಾಗಿದ್ದ ಇವರಿಗೆ ನೀರಿನ ಸಮಸ್ಯೆಯಿಂದ ಕೃಷಿ ಹಾಳಾದ ಕಾರಣ ಮನನೊಂದು, ನಿದ್ರಾಹೀನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಪತ್ನಿಯ ತಮ್ಮನ ಮನೆ ಪುದುವಿಗೆ ಬಂದಿದ್ದರು. ಅಲ್ಲಿಂದ ನಿದ್ರಾಹೀನತೆ ಸಮಸ್ಯೆಗೆ ಪರಿಹಾರಕ್ಕಾಗಿ ಮಂಗಳೂರಿನ ವೈದ್ಯರ ಬಳಿಗೆ ಚಿಕಿತ್ಸೆಗೆ ತೆರಳಿ ವಾಪಸ್‌ ಬಾವನ ಮನೆಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದು, ಮಧ್ಯ ರಾತ್ರಿ ಇವರು ಮಲಗಿದ್ದಲ್ಲಿ ಇಲ್ಲದೆ ಕಾಣೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ಬಾವಿಯಲ್ಲಿ ನೀರು ಎಳೆಯಲು ಹಾಕಿರುವ ರಾಟೆಯ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಮ್ಮಶುಭಕರ ರೈ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌ಗೆ ಮೂವರು ಬಲಿ; ರಕ್ಷಣೆ ಕೊಡಲಾಗದಿದ್ದರೆ ಜಾಗ ಖಾಲಿ ಮಾಡಿ: ಶಾಸಕ ಚನ್ನಬಸಪ್ಪ
    on May 9, 2024 at 6:30 am

    ಶಿವಮೊಗ್ಗ (ಮೇ 09): ಶಿವಮೊಗ್ಗ ನಗರದಲ್ಲಿ ಗ್ಯಾಂಗ್‌ವಾರ್ ನಡೆದು ಮೂರು ಮೂರು ಕೊಲೆಗಳಾಗಿವೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ತಡೆಯಲು ಮುಂದಾಗದ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಮಾನಸಿಕತೆಗೆ ತಕ್ಕಂತೆ ನಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲದವರು, ಜನರಿಗೆ ರಕ್ಷಣೆ ಕೊಡಲಾಗದವರು ಇಲ್ಲಿದ್ದು ಪ್ರಯೋಜನವಿಲ್ಲ. ನೀವು ಜಾಗ ಖಾಲಿ ಮಾಡಿ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗ ನಗರದಲ್ಲಿ ಗುರುವಾರ ಸುದ್ದೊಗೋಷ್ಠಿಯೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್ ನಡೆದು ಮೂರು ಕೊಲೆಗಳಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ನೇರ ಕಾರಣ. ಪೊಲೀಸರಿಗೆ ಮಾಹಿತಿ ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಶಿವಮೊಗ್ಗಕ್ಕೆ ಇಂತಹ ಬೇಜವಾಬ್ದಾರಿ ರಕ್ಷಣಾಧಿಕಾರಿಗಳ ಅವಶ್ಯಕತೆ ಇಲ್ಲ. ಸಾಲು ಸಾಲು ಕೊಲೆಗಳನ್ನು ಮಾಡಲು ರಕ್ಷಣೆ ಇಲಾಖೆಯ ಕುಮ್ಮಕ್ಕು ಇದೆ. ಕರ್ತವ್ಯದಲ್ಲಿ ಬೇಜವಾಬ್ದಾರಿ ನೆಪವೊಡ್ಡಿ ಕೂಡಲೇ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಇಂತಹ ಹಾಡ ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವಂತಹ ತಂಡ ಶಿವಮೊಗ್ಗದಲ್ಲಿ ಬೆಳೆಯುವುದಕ್ಕೆ ನೇರವಾಗಿ ಪೊಲೀಸ್ ಇಲಾಖೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು. Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ ಕಳೆದ ತಿಂಗಳು ಏಪ್ರಿಲ್ 6ರಂದು ಸರ್ಕಾರಿ ನೌಕರ ಬಸ್ ಚಾಲಕ ಶರವಣ್ಣನ ಮೇಲೆ ರೌಡಿಗಳ ಗುಂಪು ಅಟ್ಯಾಕ್ ಮಾಡಿದೆ. ಆದರೆ, ಇದುವರೆಗೂ ಪೊಲೀಸರು ಈ ರೌಡಿಗಳನ್ನು ಬಂಧಿಸುವ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲಿ ಓಸಿ, ಅಫೀಮು, ಗಾಂಜಾ ಸಾಗಣೆ ಮೊದಲಾದ ಕೃತ್ಯಗಳಿಗೆ ಪೊಲೀಸರ ಸಹಕಾರವಿದೆ ಎಂಬುದನ್ನೂ ನಾನು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೆನು. ಇದಕ್ಕೆ ಸಾಕ್ಷಿ ಕೇಳಿದ್ದರು, ಸಾಕ್ಷಿ ಇಲ್ಲದೆ ನಾವು ಕ್ರಮ ತೆಗೆದುಕೊಳ್ಳುವ ಹಾಗಿಲ್ಲ ಎಂದಿದ್ದರು. ಕೆಲವೇ ದಿನಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೂಜಾಟ ಓಸಿ ನಡೆಸುವವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ನಿಮ್ಮ ಮೂಗಿನ ಕೆಳಗೆ ಸಾಕ್ಷಿ ಇದೆ, ಇನ್ನು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಕಿಡಿಕಾರಿದರು. ಶಿವಮೊಗ್ಗ ಜಿಲ್ಲಾ ಪೊಲೀಸರು ಕಾಂಗ್ರೆಸ್ಸಿನ ಮಾನಸಿಕತೆಗೆ ತಕ್ಕಂತೆ ಆಟ ಆಡಬೇಡಿ. ಸಾಗರದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತ  ವಿನೋದ್ ರಾಜ್ ಮೇಲೆ ಸುಳ್ಳು ಕೇಸ್ ಹಾಕಿ ಗಡಿಪಾರು ಮಾಡಿದ್ದೀರಾ? ಸುಖಾ ಸುಮ್ಮನೆ ಹಿಂದೂಗಳನ್ನು ಗಡಿಪಾರು ಮಾಡುವ ಕೆಲಸ ಮಾಡುತ್ತೀರಾ? ಊರಿನಲ್ಲಿ ಇಲ್ಲದವರ ಹೆಸರುಗಳನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿದ್ದೀರಾ? ಚುನಾವಣೆಗೆ ಮುಂಚೆ ರೌಡಿಗಳ ಪೆರೇಡ್ ಮಾಡಿಸಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತ ಆಟೋ ನಾಗನ ಮನೆಗೆ ನುಗ್ಗಿ ತಲವಾರ್ ಇದೆ ಎಂದು ಚೆಕ್ ಮಾಡಿದ್ದೀರಾ? ಯಾಕೆ ನಿನ್ನೆ ಗ್ಯಾಂಗ್ ವಾರ್ ನಡಿತಲ್ಲ ಆಗ ನಿಮಗೆ ತಲವಾರು ಸಿಗಲಿಲ್ವಾ? ಚುನಾವಣೆ ನಡೆಯುವ ದಿನ ಈ ರೀತಿ ಘಟನೆಗಳು ನಡೆದಿವೆಯಲ್ಲ ನೀವೆಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಾ ಎಂದು ಗೊತ್ತಾಯಿತು ಎಂದರು. ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ ಶಿವಮೊಗ್ಗದಲ್ಲಿ ನಡೆದ ಘಟನೆಯ ಬಳಿಕ ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ನಿಮ್ಮ ಬೇಜವಾರಿತನಕ್ಕೆ ತಕ್ಕ ಶಿಕ್ಷೆ ಆಗಬೇಕು . ಗೃಹ ಸಚಿವರು ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಗೃಹ ಇಲಾಖೆ ಬದುಕಿದೆಯೋ? ಸತ್ತಿದೆಯೋ ? ಎಂದು ಜನತೆಗೆ ತಿಳಿಸಿ. ಯಾರ ಬಳಿ, ಎಲ್ಲಿ ತಲವಾರುಗಳು ಇದೆ ಎಂಬುದನ್ನು ಪೊಲೀಸರಿಗೆ ತಿಳಿಸಿದರೂ ಅದನ್ನು ಹುಡುಕುವುದಿಲ್ಲ. ನಿಮ್ಮಂತವರು ಇಲ್ಲಿದ್ದು ಏನು ಪ್ರಯೋಜನವಿಲ್ಲ ಜಾಗ ಖಾಲಿ ಮಾಡಿ ಎಂದು ಸ್ಥಳೀಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಪಿಂಕ್‌ ಟಿಕೆಟ್‌ ಕಳೆದುಕೊಂಡರೆ ಕಂಡಕ್ಟರ್‌ಗಳಿಗೆ 10 ರೂ. ದಂಡ: ನಿರ್ವಾಹಕರಿಗೆ ಮತ್ತೊಂದು ತಲೆನೋವು..!
    on May 9, 2024 at 6:24 am

    ಬೆಂಗಳೂರು(ಮೇ.09):  ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಿರ್ವಾಹಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಈಗಾಗಲೆ ಹೈರಾಣಾಗಿರುವ ನಿರ್ವಾಹಕರಿಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದ್ದು, ಮಹಿಳಾ ಪ್ರಯಾಣಿಕರಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್ ಕಳೆದುಕೊಂಡರೆ ನಿರ್ವಾಹಕರೆ ದಂಡ ಪಾವತಿಸಬೇಕು ಎಂದು ಕೆಎಸ್ಸಾರ್ಟಿಸಿ ಆದೇಶಿಸಿದೆ. ಶಕ್ತಿ ಯೋಜನೆ ಜಾರಿ ನಂತರದಿಂದ ಮಹಿಳಾ ಪ್ರಯಾಣಿಕರಿಗೆ ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಉಚಿತ ಟಿಕೆಟ್ ನೀಡಬೇಕಿದೆ. ಅದರ ನಡುವೆ ಟಿಕೆಟ್ ವಿತರಿಸಲು ನೀಡಲಾಗಿರುವ ಇಟಿಎಂ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರಿಗೆ ನೀಡಲು ಶೂನ್ಯ ಮೌಲ್ಯದ ಪಿಂಕ್ ಟಿಕೆಟ್‌ ಗಳನ್ನು ನಿರ್ವಾಹಕರಿಗೆ ನೀಡಿದೆ. ಆದರೆ, ಈ ಪಿಂಕ್ ಟಿಕೆಟ್‌ಗಳನ್ನು ನಿರ್ವಾಹಕರು ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ವಿತರಿಸಲಾಗದೆ ಉಳಿದಿರುವ ಟಿಕೆಟ್‌ಗಳನ್ನು ನಿರ್ವಾಹಕರು ಕಳೆದುಕೊಂಡರೆ ಪ್ರತಿ ಟಿಕೆಟ್‌ಗೆ 10 ರು.ನಂತೆ ದಂಡದ ರೂಪದಲ್ಲಿ ವಸೂಲಿ ಮಾಡಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಶಕ್ತಿ ಯೋಜನೆ: 200 ಕೋಟಿ ಮಹಿಳೆಯರಿಂದ ರಾಜ್ಯದಲ್ಲಿ ಫ್ರೀ ಬಸ್‌ ಯಾನ! ಕೆಎಸ್ಸಾರ್ಟಿಸಿಯ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ವ. ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್್ರ ಯೂನಿಯನ್, ಶಕ್ತಿ ಯೋಜನೆ ಜಾರಿ ನಂತರ ನಿರ್ವಾಹಕರು ಹಲವು ರೀತಿಯ ಮಾನಸಿಕ ಮತ್ತು ಕಾರ್ಯದೊತ್ತಡ ಎದುರಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ನಿಗಮಕ್ಕೆ ಬೆಲೆ ಸಿಗುತ್ತಿಲ್ಲ. ಅದರ ನಡುವೆ ಇದೀಗ ಪಿಂಕ್ ಟಿಕೆಟ್‌ಗಳನ್ನು ಕಾಯಬೇಕಾದ ಕೆಲಸವೂ ನಿರ್ವಾಹಕರ ಮೇಲೆ ಬಂದಿದೆ. ಇದು ನಿರ್ವಾಹಕರ ಮನೋಬಲ ಕಸಿಯಲಿದೆ. ಹೀಗಾಗಿ ಪಿಂಕ್ ಟಿಕೆಟ್ ಕಳೆದುಹೋದರೆ ಹೋದರೆ ದಂಡವಿಧಿಸುವ ದಂಡವಿಧಿಸ ಆದೇಶವನ್ನು ನಿಗಮ ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

  • ಲಖನೌ ಹೀನಾಯವಾಗಿ ಸೋಲುತ್ತಿದ್ದಂತೆಯೇ ಕೆ ಎಲ್ ರಾಹುಲ್ ಮೇಲೆ ಸಂಜೀವ್ ಗೋಯೆಂಕಾ ಸಿಡಿಮಿಡಿ.! ವಿಡಿಯೋ ವೈರಲ್
    on May 9, 2024 at 6:19 am

    ಹೈದರಾಬಾದ್(ಮೇ.09): ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ಎದುರು 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಲಖನೌ ನೀಡಿದ್ದ 166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೇವಲ 9.4 ಓವರ್‌ಗಳಲ್ಲಿ ಗುರಿ ತಲುಪಿತು. ಈ ಮೂಲಕ 150+ ರನ್‌ಗಳ ಗುರಿಯನ್ನು ಅತಿ ಕಡಿಮೆ ಎಸೆತಗಳನ್ನು ಎದುರಿಸಿ ಯಶಸ್ವಿಯಾಗಿ ಗುರಿ ತಲುಪಿದ ತಂಡ ಎನ್ನುವ ಹಿರಿಮೆಗೆ ಆರೆಂಜ್ ಆರ್ಮಿ ಪಾತ್ರವಾಯಿತು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇನ್ನೂ 62 ಎಸೆತ ಬಾಕಿ ಇರುವಂತೆಯೇ ಆರೆಂಜ್ ಆರ್ಮಿಯನ್ನು ಗೆಲುವಿನ ದಡ ಸೇರಿಸಿತು. ಈ ಆಘಾತಕಾರಿ ಸೋಲು ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಅವರನ್ನು ಕಂಗೆಡಿಸುವಂತೆ ಮಾಡಿದೆ. ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರಾಹುಲ್ ” ಏನು ಹೇಳಲು ಮಾತೇ ಬರುತ್ತಿಲ್ಲ” ಎಂದರು. IPL 2024: ‘ರನ್‌ರೈಸರ್ಸ್‌’ ಆರ್ಭಟಕ್ಕೆ ಲಖನೌ ಸೂಪರ್ ಜೈಂಟ್ಸ್‌ ತತ್ತರ! ಇನ್ನು ಸನ್‌ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲು ಕಾಣುತ್ತಿದ್ದಂತೆಯೇ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮೈದಾನದಲ್ಲೇ ನಾಯಕ ಕೆ ಎಲ್ ಅವರನ್ನು ತರಾಟೆಗೆ ತೆಗೆದುಕೊಂಡಂತ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.  ಹೀಗಿತ್ತು ನೋಡಿ ಆ ಕ್ಷಣ: Post match meet b/w Sanjiv Goenka & KL Rahul. #IPL2024 | #LSG pic.twitter.com/hGXmrVsCQV — SuperGiantsArmy™ — LSG FC (@LucknowIPLCover) May 8, 2024 ಇನ್ನು ಸಂಜೀವ್ ಗೋಯೆಂಕಾ ಅವರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ   LSG owner Sanjiv Goenka doesn’t look happy. pic.twitter.com/xpSr21ElXT — Prasenjiit Dey (@CricPrasen) May 8, 2024 ಇನ್ನು ಲಖನೌ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಲಖನೌ ಆರಂಭಿಕ ಆಘಾತದ ಹೊರತಾಗಿಯೂ ಆಯುಷ್ ಬದೋನಿ(55*) ಹಾಗೂ ನಿಕೋಲಸ್ ಪೂರನ್(48) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತ್ತು. ಆರ್‌ಸಿಬಿ vs ಪಂಜಾಬ್ ಕಿಂಗ್ಸ್: ಪ್ಲೇ ಆಫ್‌ ರೇಸ್ ಗೆಲ್ಲೋರು ಯಾರು? ಇನ್ನು ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ, ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಟ್ರ್ಯಾವಿಸ್ ಹೆಡ್ 30 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ ಅಜೇಯ 89 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  • ಅವಕಾಶ ಕೊಡಿ ಎಂದು ಕೇಳಿದ್ದಕ್ಕೆ ಬಟ್ಟೆ ಬಿಚ್ಚು, ಸ್ಟ್ರೆಚ್‌ ಮತ್ತು ಮಚ್ಚೆ ತೋರ್ಸು ಅಂದ್ರು: ನಟಿ ಆಮನಿ
    on May 9, 2024 at 6:19 am

    ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಆಮಿನಿ ಈ ಹಿಂದೆ ಅವಕಾಶಗಳನ್ನು ಹುಡುಕಿಕೊಂಡು ಹೋದಾಗ ಹೊಸ ಚಿತ್ರತಂಡದವರು ಹೇಗೆ ವರ್ತಿಸುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.  ‘ಸಾವಿತ್ರಿ ಕಾಲದಿಂದಲೂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳಿಗೆ ಇಂತಹ ಸಮಸ್ಯೆಗಳು ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ನಾವು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಕಷ್ಟ ಪಟ್ಟು ಇಲ್ಲಿಗೆ ಬರುತ್ತಾರೆ. ಯಾರಿಗೂ ಅಷ್ಟು ಸುಲಭವಾಗಿ ಅವಕಾಶ ಮತ್ತು ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಒಳ್ಳೆಯದು ಕಟ್ಟದ್ದು ಇದ್ದೇ ಇರುತ್ತದೆ.  ಅದನ್ನು ಸರಿಯಾಗಿ ನೋಡಿ ಆಯ್ಕೆ ಮಾಡಿಕೊಳ್ಳಬೇಕು ನಾವು. ತಮಿಳು ಚಿತ್ರರಂಗದಲ್ಲಿ ನನಗೂ ಕೆಟ್ಟ ಅನುಭವ ಆಗಿದೆ. ದೊಡ್ಡ ಸಿನಿಮಾ ಸಂಸ್ಥೆಗಳಲ್ಲಿ ಅಲ್ಲ ಸಿನಿಮಾ ಮಾಡುತ್ತೀವಿ ಎಂದು ಬರುವ ಹೊಸಬರಿಂದ. ನಮಗೆ ಅವರು ಹೊಸಬರು ಕೆಟ್ಟವರು ಅಥವಾ ಒಳ್ಳೆಯವರು ಎಂದು ಹೇಗೆ ಗೊತ್ತಾಗುತ್ತದೆ? ಅವಕಾಶಗಳನ್ನು ಹುಡುಕುತ್ತಿರುವಾಗ ಅವಕಾಶ ಸಿಕ್ಕಾಗ ಒಪ್ಪಿಕೊಂಡು ಮಾಡುತ್ತೆವೆ’ ಎಂದು ಆಮಿನಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬೆಡ್‌ರೂಮಿಗೆ ಕರೆದು ತಬ್ಬಿಕೋ ಎಂದು ನಿರ್ದೇಶಕ, ಕ್ಯಾಮೆರಾ ಎಲ್ಲೂ ಇಲ್ಲ: ಉರ್ಫಿ ಜಾವೇದ್ ಬಿಚ್ಚಿಟ ಕರಾಳ ಘಟನೆ ‘ಸಿನಿಮಾದಲ್ಲಿ ಅವಕಾಶ ಇದೆ ಎಂದು ಮ್ಯಾನೇಜರ್ ಕರೆ ಮಾಡಿದಾಗ ನಾವು ಹೋಗುತ್ತೇವೆ. ಟೂ ಪೀಸ್ ಹಾಕಬೇಕು. ತೊಡೆ ಮೇಲೆ ಸ್ಟ್ರೆಚ್‌ ಮಾರ್ಕ್‌ಗಳು ಇರುತ್ತದೆ ಅದು ನಿಮಗೂ ಇದ್ಯಾ…ತೋರಿಸಿ ಎಂದು ಕೇಳುತ್ತಾರೆ. ನನಗೆ ಯಾಕೆ ಇರುತ್ತದೆ..ನನಗೆ ಇಲ್ಲ ಅಂದ್ರೆ ಒಮ್ಮೆ ತೋರಿಸಿ ಎನ್ನುತ್ತಾರೆ. ತಾಯಿ ಅಥವಾ ಸಹೋದರನ ಜೊತೆ ಸಿನಿಮಾ ಆಡಿಷನ್ ಅಥವಾ ಅವಕಾಶ ಕೇಳಲು ಹೋಗುತ್ತೀವಿ ಅವರ ಮುಂದೆ ಈ ರೀತಿ ಮಾತನಾಡಿದರೆ ನಾವು ಹೇಗೆ ವರ್ತಿಸಬೇಕು? ಕೆಟ್ಟ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವ ನೆಪದಲ್ಲಿ ಆಫೀಸ್‌ ತೆಗೆಯುತ್ತಾರೆ’ ಎಂದು ಆಮಿನಿ ಹೇಳಿದ್ದಾರೆ. ಅವಕಾಶ ಬೇಕು ಅಂದ್ರೆ ನಟ, ನಿರ್ದೇಶಕ ಮಾತ್ರವಲ್ಲ ‘ಆ’ ವ್ಯಕ್ತಿ ಜೊತೆಗೂ ಮಲಗಬೇಕು; ಕಿರುತೆರೆ ನಟಿ ಹೇಳಿಕೆ ವೈರಲ್ ‘ಆ ಸಮಯದಲ್ಲಿ ಅವರ ಉದ್ದೇಶ ಏನು ಎಂಬುದು ಅರ್ಥವಾಗಿ ಬಿಡುತ್ತದೆ. ಒಳ್ಳೆ ಸಂಸ್ಥೆಗಳಲ್ಲಿ ಈ ರೀತಿ ಪ್ರಶ್ನೆ ಮಾಡಲ್ಲ ಆಡಿಷನ್‌ ಮಾಡಲ್ಲ. ದೊಡ್ಡ ಸಂಸ್ಥೆಗಳು ಸದಾ ನಟನೆ ಮೇಲೆ ಗಮನ ಕೊಡುತ್ತಾರೆ….ಸನ್ನಿವೇಶ ಕೊಟ್ಟು ನಟಿಸಿ ತೋರಿಸಬೇಕು. ಅದು ಬಿಟ್ಟು ಸ್ಟ್ರೆಚ್‌ ಮಾರ್ಕ್‌ ತೋರಿಸು, ಕಪ್ಪು ಮಚ್ಚೆ ಇದ್ಯಾ ಅಂತಾರೆ. ಮೊನ್ನೆ ಬಬ್ಬ ನಟಿಯನ್ನು ಹೀಗೆ ಆಯ್ಕೆ ಮಾಡಿಕೊಂಡು ಬಟ್ಟೆ ಬಿಚ್ಚಿ ತೋರ್ಸಿ ಅಂದಿದ್ದಾರೆ. ‘ನನ್ನನ್ನು ಹೀಗೆ ಕೇಳಿದಾಗ ನನಗೆ ಸ್ವಿಮ್ಮಿಂಗ್ ಬರಲ್ಲ ನನಗೆ ಈ ರೀತಿ ಪಾತ್ರಗಳು ಬೇಡ ಎಂದು ಎದ್ದು ಬಂದಿರುವೆ. ಸರಿ ತೋರಿಸುತ್ತೀನಿ ಅನ್ನೋದು ಅವರಿಗೆ ಬಿಟ್ಟ ವಿಚಾರ..ಚಿತ್ರಕಥೆ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನಾನು ಟೂ ಪೀಸ್ ಹಾಕುತ್ತೀನಿ…ಅದು ಬಿಟ್ಟು ಆ ಮಾರ್ಕ್‌ ತೋರಿಸು ಈ ಮಚ್ಚೆ ತೋರಿಸು ಅಂದಾಗ ಎದ್ದು ಬಂದಿರುವ ಸಂದರ್ಭವೂ ಇದೆ ಎಂದಿದ್ದಾರೆ ಅಮಿನಿ.

  • ಭಾರತ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ: ಅಮೆರಿಕ ಉದ್ಯಮಿ
    on May 9, 2024 at 6:19 am

    ಸಾಂತಾ ಕ್ಲಾರಾ (ಅಮೆರಿಕ) (ಮೇ.09): ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್‌ ಭಟ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಭಾರತ ಹಾಗೂ ಭಾರತೀಯರ ಬಗೆಗೆಗಿನ ಭಾವನೆ ಬದಲಾಗಿದೆ. ಭಾರತ ಹಿಂದೆಂದೊಗಿಂತಲೂ ಭಾರಿ ವೇಗವಾಗಿ ಬೆಳೆಯುತ್ತಿದೆ.  ಜಾಗತಿಕವಾಗಿ ಭಾರತದ ಆರ್ಥಿಕತೆ ಬೆಳಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿವಾಗಿ ನಾನು ಮೋದಿ ಅವರ ಅಭಿಮಾನಿಯಾಗಿದ್ದು, ಅವರು ದೇಶದ ಆರ್ಥಿಕತೆ ಬೆಳಗುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಭಾರತದ ವಿಶ್ವದ ಐದನೇ ದುಡ್ಡ ಆರ್ಥಿಕತೆಯಾಗಿದೆ. ಭಾರತ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ’ ಎಂದರು. ಅಂಬಾನಿ, ಅದಾನಿ ಬಗ್ಗೆ ರಾಹುಲ್‌ ಮೌನ ಏಕೆ?: ‘ಕಳೆದ 5 ವರ್ಷಗಳಿಂದ ಸತತವಾಗಿ ಅಂಬಾನಿ-ಅದಾನಿ ವಿರುದ್ಧ ದಾಳಿ ನಡೆಸುತ್ತಿದ್ದ ಶೆಹಜಾದಾ (ರಾಹುಲ್‌ ಗಾಂಧಿ), ಇದೀಗ ಅವರ ಮೇಲಿನ ದಾಳಿ ದಿಢೀರ್‌ ನಿಲ್ಲಿಸಿದ್ದು ಏಕೆ ಎಂಬ ಬಗ್ಗೆ ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಅಲ್ಲದೇ, ‘ಈ ಕುರಿತು ಡೀಲ್ ಏನಾದರೂ ಕುದುರಿದೆಯಾ?’ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ ನಾಯಕರು ಮೋದಿ ಜೊತೆಗಿನ ಅಂಬಾನಿ ಮತ್ತು ಅದಾನಿ ಸ್ನೇಹ ಹೋಲಿಸಿ ಭಾರೀ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಈ ಬಗ್ಗೆ ಎಂದಿಗೂ ಪ್ರತಿಕ್ರಿಯೆ ನೀಡದ ಮೋದಿ, ಇದೀಗ ‘ಉಭಯ ಉದ್ಯಮಿಗಳ ಜೊತೆ ರಾಹುಲ್‌ ಡೀಲ್‌ ಕುದುರಿಸಿದ್ದಾರಾ?‘ ಎಂದು ಪ್ರಶ್ನಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹರ್ಯಾಣ ಸರ್ಕಾರ ವಜಾಗೆ ಕಾಂಗ್ರೆಸ್‌ ಪಟ್ಟು: ಬಿಜೆಪಿ ಸಿಎಂ ನಯಬ್‌ ಸಿಂಗ್ ಹೇಳಿದ್ದೇನು ಡೀಲ್‌ ಏನು?: ತೆಲಂಗಾಣದ ವೇಮುಲವಾಡದಲ್ಲಿ ಬುಧವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಯಾವಾಗ ಚುನಾವಣೆ ಆರಂಭವಾಯಿತೋ ಅಂದಿನಿಂದಲೂ ಇವರು (ಕಾಂಗ್ರೆಸ್‌) ಅಂಬಾನಿ-ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಹೀಗಾಗಿ, ಅಂಬಾನಿ- ಅದಾನಿಯಿಂದ ಎಷ್ಟು ಎತ್ತಲಾಯಿತು ಎಂಬುದರ ಬಗ್ಗೆ ಶೆಹಜಾದಾ ಘೋಷಣೆ ಮಾಡಲಿ ಎಂದು ನಾನು ತೆಲಂಗಾಣದ ಈ ನೆಲದಿಂದ ಪ್ರಶ್ನಿಸಲು ಬಯಸುತ್ತೇನೆ. ಟೆಂಪೋ ಲೋಡ್‌ ತುಂಬಾ ನೋಟು ಕಾಂಗ್ರೆಸ್‌ಗೆ ಸೇರಿತೇ? ರಾತ್ರೋರಾತ್ರಿ ಅಂಬಾನಿ- ಅದಾನಿ ನಿಂದನೆ ನಿಲ್ಲಿಸಲು ಅದ್ಯಾವ ಯಾವ ಒಪ್ಪಂದಕ್ಕೆ ಬರಲಾಗಿದೆ?’ ಎಂದು ಮೋದಿ ಕಾಂಗ್ರೆಸ್‌ ಮತ್ತು ರಾಹುಲ್‌ಗೆ ಗಂಭೀರ ಪ್ರಶ್ನೆಗಳನ್ನು ಎಸೆದಿದರು.

  • ಒಂದೇ ಗಂಟೇಲಿ 1100 ಮರ ತಬ್ಬಿಕೊಂಡು ಗಿನ್ನೆಸ್ ದಾಖಲೆ ಸೇರಿದ ಯುವಕ; ವೈರಲ್ ವಿಡಿಯೋ ಇಲ್ಲಿದೆ..
    on May 9, 2024 at 6:10 am

    ಘಾನಾದ ಈ 29 ವರ್ಷದ ಯುವಕ ಒಂದೇ ಗಂಟೆಯಲ್ಲಿ 1100 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.  ಘಾನಾ ಮೂಲದ 29 ವರ್ಷದ ಅರಣ್ಯ ವಿದ್ಯಾರ್ಥಿ ಮತ್ತು ಸಮರ್ಪಿತ ಪರಿಸರ ಕಾರ್ಯಕರ್ತ ಅಬುಬಕರ್ ತಾಹಿರು ಇತ್ತೀಚೆಗೆ ಮರದ ಅಪ್ಪುಗೆಯಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ. ಪ್ರಕೃತಿಯ ಮೇಲಿನ ಪ್ರೀತಿಯ ವಿಸ್ಮಯಕಾರಿ ಪ್ರದರ್ಶನ ಆತನದಾಗಿತ್ತು. ಇದರಿಂದ ಆತ  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಾಲ್ ಆಫ್ ಫೇಮ್‌ನಲ್ಲಿ ಅಸ್ಕರ್ ಸ್ಥಾನವನ್ನು ಗಳಿಸಿದರು.  ವೀಡಿಯೊದಲ್ಲಿ ಸೆರೆಹಿಡಿಯಲಾದ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿರುವ ಗಮನಾರ್ಹ ಸಾಧನೆಯು ವ್ಯಾಪಕ ಗಮನ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ರಂಜಾನ್ ಉಪವಾಸವನ್ನು ಆಚರಿಸುವಾಗ ಈ ಅಸಾಮಾನ್ಯ ಪ್ರಯತ್ನವನ್ನು ಕೈಗೊಳ್ಳುವುದು ತಾಹಿರುಗೆ ಸವಾಲಿನ ಹೆಚ್ಚುವರಿ ಪದರವನ್ನು ಸೇರಿಸಿತು. ಅನುಭವವನ್ನು ಪ್ರತಿಬಿಂಬಿಸುತ್ತಾ, ‘ಪ್ರಯತ್ನದ ಉದ್ದಕ್ಕೂ ನೀರು ಕುಡಿಯಲು ಸಾಧ್ಯವಾಗದಿರುವುದು ಸವಾಲಾಗಿತ್ತು, ಇದು ವಿಶೇಷವಾಗಿ ಅಗತ್ಯವಾದ ದೈಹಿಕ ಪರಿಶ್ರಮವನ್ನು ನೀಡಿತು’ ಎಂದು ತಾಹಿರು ಹೇಳಿದ್ದಾರೆ. ‘ಮುಸ್ಲಿಮರಿಗೆ ಲಿವ್ ಇನ್ ಸಂಬಂಧದಲ್ಲಿರುವ ಹಕ್ಕಿಲ್ಲ. ಆದರೆ..’ ಹೈಕೋರ್ಟ್ ಮಹತ್ವದ ಆದೇಶ   ಆದರೆ ಈ ಮಿತಿಯು ತಾಹಿರುಗೆ ಅನುಕೂಲಕರವೇ ಆಯಿತು. ಇದರಿಂದ ನೀರಿನ ವಿರಾಮಗಳಿಗಾಗಿ ಸಮಯ ವ್ಯರ್ಥ ಮಾಡದೆ, ತಡೆರಹಿತ ಗಮನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಅವರು ಒಂದು ಗಂಟೆಯಲ್ಲಿ  1,123 ಮರಗಳನ್ನು ಅಪ್ಪಿಕೊಂಡರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿರುವ ವೀಡಿಯೊವು ತಾಹಿರು ಅವರ ಗಮನಾರ್ಹ ಚುರುಕುತನ ಮತ್ತು ದೃಢತೆಯನ್ನು ಪ್ರದರ್ಶಿಸುತ್ತದೆ. ಏಕೆಂದರೆ ಅವರು ಮರಗಳ ನಂತರ ಮರವನ್ನು ತ್ವರಿತವಾಗಿ ಅಪ್ಪಿಕೊಳ್ಳುತ್ತಾರೆ.  ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟವಾದಾಗಿನಿಂದ, ವೀಡಿಯೊವು ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 28,000ಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದೆ, ವಿಶ್ವದಾದ್ಯಂತದ ಬಳಕೆದಾರರು ತಾಹಿರು ಅವರ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿದ್ದಾರೆ. ನೀಲಿ ಅರಿಶಿನ ಬೆಳೆದು ಬಂಪರ್ ಲಾಭ ಗಳಿಸುತ್ತಿರೋ ರೈತರು; ಇದನ್ಯಾಕೆ ಬಳಸ್ತಾರೆ?   700 ಮರಗಳ ಕನಿಷ್ಠ ಅವಶ್ಯಕತೆಯನ್ನು ಮೀರಿಸುವ ಮೂಲಕ, ತಾಹಿರು ಗಿನ್ನೆಸ್ ವಿಶ್ವ ದಾಖಲೆಯ ಹೋಲ್ಡರ್ ಆಗಿ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಮರಗಳ ಪ್ರಾಮುಖ್ಯತೆಯ ಬಗ್ಗೆ ಕಟುವಾದ ಸಂದೇಶವನ್ನು ನೀಡಿದ್ದಾರೆ. ‘ಈ ವಿಶ್ವ ದಾಖಲೆಯನ್ನು ಸಾಧಿಸುವುದು ನಂಬಲಾಗದಷ್ಟು ಲಾಭದಾಯಕವಾಗಿದೆ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಮರಗಳ ನಿರ್ಣಾಯಕ ಪಾತ್ರವನ್ನು ಹೈಲೈಟ್ ಮಾಡಲು ಇದು ಅರ್ಥಪೂರ್ಣ ಸೂಚಕವಾಗಿತ್ತು ಮತ್ತು ಪರಿಸರ ಸಂರಕ್ಷಣೆಯ ತುರ್ತನ್ನು ಹೇಳಬೇಕಿತ್ತು’ ಎಂದು ತಾಹಿರು ಹೇಳಿದ್ದಾರೆ.  ಕೃಷಿ ಸಮುದಾಯದಿಂದ ಬಂದ ತಾಹಿರು ಪ್ರಕೃತಿ ಮತ್ತು ಸಂರಕ್ಷಣೆಗಾಗಿ ಅಪಾರ ಉತ್ಸಾಹ ಹೊಂದಿದ್ದಾರೆ. ಹೀಗಾಗಿ, ಅರಣ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2023 ರಲ್ಲಿ USAಯ ಅಲಬಾಮಾದ ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ.           View this post on Instagram                       A post shared by Guinness World Records (@guinnessworldrecords)

  • ಬೈಲಹೊಂಗಲ: ಅಪ್ರಾಪ್ತ ಪುತ್ರಿಯನ್ನು ಪೀಡಿಸುತ್ತಿದ್ದ ಇಬ್ಬರನ್ನು ಕೊಂದ ತಂದೆ..!
    on May 9, 2024 at 6:05 am

    ಬೈಲಹೊಂಗಲ(ಮೇ.09):  ಅಪ್ರಾಪ್ತಯನ್ನು ಮದುವೆಯಾಗುವಂತ ಪೀಡಿಸುತ್ತಿದ್ದ ಯುವಕ ಹಾಗೂ ಅವನ ಸಹೋದರನನ್ನು ಹುಡುಗಿಯ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.  ತಾಲೂಕಿನ ದುಂಡನಕೊಪ್ಪ ಗ್ರಾಮದ ಮಾಯಪ್ಪ ಸೋಮಪ್ಪ ಅಳಗೋಡಿ (20), ಯಲ್ಲಪ್ಪ ಸೋಮಪ್ಪ ಅಳಗೋಡಿ (22) ಕೊಲೆಯಾದ ಸಹೋದರರು.  ಓದುವುದಕ್ಕಾಗಿ ಜಮೀನು ಮಾರಿ ಮಗನ ವಿದೇಶಕ್ಕೆ ಕಳುಹಿಸಿದ ರೈತ: ಅಲ್ಲಿ ಭಾರತೀಯರಿಂದಲೇ ವಿದ್ಯಾರ್ಥಿ ಕೊಲೆ ಅದೇ ಗ್ರಾಮದ ಫಕ್ಕೀರಪ್ಪ ಮಾರುತಿ ಭಾಂವಿಹಾಳ (50) ಹತ್ಯೆ ಆರೋಪಿಯಾಗಿದ್ದು, ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ವೀರೇಶ ಮಠಪತಿ ಹಾಗೂ ಸಿಬ್ಬಂದಿ ಭೇಟಿ ತನಿಖೆ ಕೈಗೊಂಡಿದ್ದಾರೆ. 

  • ಅಯೋಧ್ಯೆಗೆ ಕೇರಳ ಗವರ್ನರ್ ಭೇಟಿ: ರಾಮಲಲ್ಲಾನ ಮುಂದೆ ಶಿರಬಾಗಿ ನಮಸ್ಕರಿಸಿದ ಆರೀಫ್ ಮೊಹಮ್ಮದ್
    on May 9, 2024 at 5:57 am

    ಅಯೋಧ್ಯಾ: ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಸದಾ ಕೆಂಡಕಾರುತ್ತಾ ಸುದ್ದಿಯಲ್ಲಿರುವ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿದ ರಾಜ್ಯಪಾಲ ಮೊಹಮ್ಮದ್ ಆರೀಫ್ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮನ ದರ್ಶನ ಪಡೆದು ರಾಮಲಲ್ಲಾನ ಮುಂದೆ ತಲೆಬಾಗಿ ನಮಸ್ಕರಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೈಶ್ರೀರಾಮ್ ಎಂಬ ಘೋಷಣೆಗಳ ನಡುವೆ ಕೇರಳ ಗವರ್ನರ್ ಮೊಹಮ್ಮದ್ ಆರೀಫ್‌ ಅಯೋಧ್ಯೆ ಶ್ರೀರಾಮನ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆಗೆ ಬಂದು ಶ್ರೀರಾಮನ ಪೂಜೆ ಮಾಡುವುದು ನನಗೆ ಹೆಮ್ಮೆಯ ವಿಚಾರ, ನಾನು ಕಳೆದ ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದೆ. ಅಂದು ಯಾವ ಭಾವನೆ ಇತ್ತೋ ಇಂದು ಅದೇ ಭಾವನೆ ಇದೆ. ಹಲವು ಬಾರಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೇನೆ. ಇದು ನಮಗೆ ಬರೀ ಖುಷಿಯ ವಿಚಾರ ಅಲ್ಲ, ಅಯೋಧ್ಯೆಗೆ ಬಂದು ಶ್ರೀರಾಮನ ಆರಾಧನೆ ಮಾಡುವುದು ನಮಗೆ ಹೆಮ್ಮೆಯ ವಿಚಾರ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.    ಅಯೋಧ್ಯೆ ರಾಮ ಮಂದಿರಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭೇಟಿ#ArifMohammadKhan #AyodhyaRamMandir #KeralaGovernor pic.twitter.com/537RCvp7Ae — Asianet Suvarna News (@AsianetNewsSN) May 9, 2024     Hijab Row:ಹಿಜಾಬ್‌ ಅಡಿ ಮುಸ್ಲಿಂ ಮಹಿಳೆಯರ ಸಮಾಧಿ: ಕೇರಳ ಗವರ್ನರ್‌ ಕಳೆದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ನಂತರ ಸಾರ್ವಜನಿಕರಿಗೆ ಅಯೋಧ್ಯೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಅಂದಿನಿಂದ ಪ್ರತಿದಿನವೂ ಲಕ್ಷಾಂತರ ಜನ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ದೇಶದ ಉದ್ಯಮಿಗಳು ಸಿನಿಮಾ ನಟರು,ಕ್ರೀಡಾಪಟುಗಳು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.  ಈ ಹಿಂದೆ ಕೇರಳ ರಾಜ್ಯಪಾಲರು, ತನ್ನನ್ನು ನೀವು ಏಕೆ ಹಿಂದೂ ಎಂದು ಕರೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಆರ್ಯಾ ಸಮಾಜದ ವತಿಯಿಂದ ಉತ್ತರ ಅಮೆರಿಕಾದ ಕೇರಳ ಹಿಂದೂಗಳು ತಿರುವನಂತಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರೀಫ್ ಮೊಹಮ್ಮದ್, ನಿಮ್ಮ ವಿರುದ್ಧ ನನ್ನ ಗಂಭೀರ ದೂರು ಇದೆ, ನೀವು ಏಕೆ ನನ್ನನ್ನು ಹಿಂದೂ ಎಂದು ಕರೆಯುತ್ತಿಲ್ಲ, ನಾನು ಹಿಂದೂ ಪದವನ್ನು ಕೇವಲ ಒಂದು ಧರ್ಮಕ್ಕೆ ಸಂಬಂಧಿಸಿದ್ದು ಎಂದು ಭಾವಿಸುವುದಿಲ್ಲ, ಅದೊಂದು ಭೌಗೋಳಿಕ ಪದ ಎಂದು ಕೇರಳ ರಾಜ್ಯಪಾಲರು ಹೇಳಿದ್ದರು.  ಕೇರಳ ರಾಜ್ಯಪಾಲರಿಗೆ ಕಪ್ಪುಬಾವುಟ ಪ್ರದರ್ಶಿಸಿದ SFI, ರಸ್ತೆಯಲ್ಲೇ ಧರಣಿ ಕುಳಿತ ಆರೀಫ್ ಮೊಹಮ್ಮದ್! ಭಾರತದಲ್ಲಿ ಜನಿಸಿದ ಯಾರೇ ಆದರೂ, ಭಾರತದಲ್ಲಿ ಉತ್ಪಾದನೆಯಾಗುವ ಆಹಾರದಿಂದ ಬದುಕುವ ಯಾರೇ ಆದರೂ, ಭಾರತದ ನದಿಗಳ ನೀರನ್ನು ಕುಡಿಯುವ ಯಾರೇ ಆದರೂ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳಲು ಅರ್ಹರಾಗಿದ್ದಾರೆ ಮತ್ತು ಆದ್ದರಿಂದ ನೀವು ನನ್ನನ್ನು ಹಿಂದೂ ಎಂದು ಕರೆಯಬೇಕು ಎಂದು ರಾಜ್ಯಪಾಲರು ಹೇಳಿದ್ದರು.

  • ದಾಬಸ್‌ಪೇಟೆ: ಫೋನ್ ಬಳಸಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ
    on May 9, 2024 at 5:57 am

    ದಾಬಸ್‌ಪೇಟೆ(ಮೇ.09): ಫೋನ್ ಬಳಸದಂತೆ ಪೋಷಕರು ಬುದ್ದಿ ವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿ ನಡೆದಿದೆ.  ತಾಲೂಕಿನ ತಿಪ್ಪಗೊಂಡನಹಳ್ಳಿ ಲಿಖಿತಾ (18) ನೇಣಿಗೆ ಶರಣಾದ ಯುವತಿ. ಪ್ಯಾರಾಮೆಡಿಕಲ್‌ ಓದುತ್ತಿದ್ದ ಲಿಖಿತಾ, ಇತ್ತೀಚೆಗೆ ಫೋನಿನ ಗೀಳು ಹತ್ತಿಸಿಕೊಂಡಿದ್ದಳಂತೆ.  ಲವ್ ಫೈಲೂರ್ ಅಂತ ವ್ಯಕ್ತಿ ಆತ್ಮಹತ್ಯೆ ಮಾಡ್ಕೊಂಡ್ರೆ ಹೆಣ್ಣಲ್ಲ ಹೊಣೆ: ಹೈ ಕೋರ್ಟ್ ಯಾವಾಗಲೂ ಫೋನಿನಲ್ಲಿ ಚಾಟಿಂಗ್ ಮಾಡುತ್ತಿದ್ದಳು. ಇದನ್ನು ಗಮನಿಸಿದ್ದ ಲಿಖಿತಾ ತಂದೆ ನಾರಾಯಣ್ ಬೈದು ಬುದ್ದಿ ಹೇಳಿದ್ದರು. ಇದರಿಂದ ಕೋಪಗೊಂಡು ರೂಮಿನಲ್ಲಿ ಪ್ಯಾನ್‌ಗೆ ನೇಣು ಬಿಗಿದುಕೊಂಡಿದಾಳೆ.

  • ನಾಲ್ಕು ತಾಸಿಗಿಂತ ಹೆಚ್ಚಿನ ನಿದ್ದೆ ಟೈಂ ವೇಸ್ಟ್ ಅಂದ್ರು ಸಿಹಿಕಹಿ ಚಂದ್ರು; ನೆಟ್ಟಿಗರಿಂದ ಶುರುವಾಯ್ತು ಪಾಠ!
    on May 9, 2024 at 5:52 am

    ಕಿರುತೆರೆಯ ಫೇಮಸ್ ನಟ-ನಿರ್ದೇಶಕ ಸಿಹಿಕಹಿ ಚಂದ್ರು (Sihi kahi Chandru)ಅವರು ಸಂದರ್ಶನವೊಂದರಲ್ಲಿ ನಿದ್ದೆ ಬಗ್ಗೆ ಮಾತನಾಡಿದ್ದಾರೆ. ನಿದ್ದೆ ಬಗ್ಗೆ ಅಂದರೆ, ಅವರ ನಿದ್ದೆ ಬಗ್ಗೆ. ಸಂದರ್ಶಕರು ಕೇಳಿದ ‘ಎಲ್ಲಾ ಸಕ್ಸಸ್‌ಫುಲ್ ಜನರು 4 ಗಂಟೆ ಅಷ್ಟೇ ನಿದ್ದೆ ಮಾಡ್ತಾರೆ ಅಂತ ಹೇಳ್ತಾರೆ. ಆದ್ರೆ ನೀವು 3 ಗಂಟೆ ಅಷ್ಟೇ.. ಏನಿದರ ಗುಟ್ಟು’ ಎಂಬ ಪ್ರಶ್ನೆಗೆ ಚಂದ್ರು ಉತ್ತರ ನೀಡಿದ್ದಾರೆ. ಹಾಗಿದ್ದರೆ, ಅಷ್ಟು ಕಡಿಮೆ ನಿದ್ದೆ ಮಾಡಿಯೂ ಸಖತ್ ಆಕ್ಟಿವ್ ಆಗಿರುವ ಚಂದ್ರು ಸೀಕ್ರೆಟ್ ಏನು? ಅವರು ನೀಡಿರುವ ಉತ್ತರವೇನು?  ‘ನಾನು ಎಸ್‌ಎಎಸ್‌ಎಲ್‌ಸಿ ಪರೀಕ್ಷೆಗೆ ಕಟ್ಟಿದಾಗ ಯಾರೋ ಏನೋ ಅಂದ್ಬಿಟ್ರು.. ನೀವೆಲ್ಲಾ ಸೋಂಬೇರಿಗಳು, ಸರಿಯಾಗಿ ಓದಲ್ಲ ಅಂತ.. ನಾನು ಚಿಕ್ಕವ್ನಿದ್ದಾಗ ತುಂಬಾ ತರ್ಲೆ ಆಗಿದ್ದೆ. ಅವ್ರು ಮಾತು ಸರಿಯಲ್ಲ ಅಂತ ನಾನು ಪ್ರೂವ್ ಮಾಡ್ಬೇಕಿತ್ತು. ಈ ಥರ ಚೇರಿಗೆ ಚೈನ್ ಹಾಕಿ, ಬೀಗ ಹಾಕ್ಬಿಟ್ಟು, ಬೀಗದ ಕೈ ಎಸದ್ಬಿಟ್ಟು  ಓದೋಕೆ ಕೂತ್ಕೊಂಡೆ.. 72 ತಾಸು ಓದಿದೀನಿ.. ಮಧ್ಯೆ ನಮ್ಮಮ್ಮನ ಕರೆದ್ಬಿಟ್ಟು ಬೀಗ ತೆಗಿ, ನಾನು ಟಾಯ್ಲೆಟ್‌ಗೆ ಹೋಗ್ಬೇಕು ಅಂತ ಹೇಳಿ ಹೋಗಿ ಬಂದಿದೀನಿ. ಅದು ಬಿಟ್ಟರೆ ಅಷ್ಟೂ ಹೊತ್ತೂ ಓದ್ತಾ ಕೂತಿದೀನಿ, ಮಧ್ಯೆ ನಿದ್ದೆ ಮಾಡಿಲ್ಲ. ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ? ಆವಾಗ ಶುರುವಾದ ಕ್ರೇಜ್ ಅದು, ನಂಗೆ ನಿದ್ದೆ ಸೆಕೆಂಡರಿ ಯಾವತ್ತೂ, ನನ್ನ ಪ್ರಕಾರ ನೀವು ನಾಲ್ಕು ಗಂಟೆಗಿಂತ ಹೆಚ್ಚು ನಿದ್ದೆ ಮಾಡೋದು ಅಂದ್ರೆ ಟೈಮ್ ವೇಸ್ಟ್ ಮಾಡ್ತಾ ಇದೀವಿ ಅಂತ..’ಎಂದಿದ್ದಾರೆ ಸಿಹಿಕಿಹಿ ಚಂದ್ರು. ಅಂದರೆ, ಸಿಹಿಕಹಿ ಚಂದ್ರು ಅವರು 4 ಗಂಟೆಗಿಂತ ಹೆಚ್ಚು ನಿದ್ದೆ ಮಾಡಲ್ಲ, ಆದರೂ ದಿನವಿಡಿ ಕ್ರಿಯಾಶೀಲವಾಗಿಯೇ ಇರ್ತಾರೆ. ಆದರೆ ಅವರು ಹೇಳಿರುವ ಈ ಮಾತಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಕಲವರಂತೂ, ‘ಅವರು ಡಾಕ್ಟರ್ಸ್ ಹಾಗೂ ಸೈಂಟಿಸ್ಟ್ ಅಭಿಪ್ರಾಯಗಳಿಗೆ ಸಂಪೂರ್ಣ ವಿರುದ್ಧವಾಗಿ ಹೇಳಿದ್ದಾರೆ’ ಎಂದಿದ್ದಾರೆ.  99 ರೂಪಾಯಿಗೆ ಪ್ರಣೀತಾ-ರಿಷಿ ರೋಮ್ಯಾನ್ಸ್‌ ನೋಡಬಹುದು; ಶುಭ್ರ ಅಯ್ಯಪ್ಪಗೆ ಅಲ್ಲೇನು ಕೆಲಸ? ಕಾಮೆಂಟ್ ಮಾಡಿದವರಲ್ಲಿ ಹಲವರು ‘ನಿದ್ದೆ ಅವರವರ ವೈಯಕ್ತಿಕ ಅಗತ್ಯ ಮತ್ತು ಅವರವರ ಆರೋಗ್ಯ-ಅನಾರೋಗ್ಯದ ಮೇಲೆ ಅವಲಂಬಿತ. ಇನ್ನೊಬ್ಬರು ಇಷ್ಟೇ ಹೊತ್ತು ನಿದ್ದೆ ಮಾಡಬೇಕು ಎಂದು ಯಾರೊಬ್ಬರೂ ಹೇಳಲು ಅಸಾಧ್ಯ. ಆದರೆ, ತಾವೆಷ್ಟು ಹೊತ್ತು ನಿದ್ದೆ ಮಾಡುತ್ತೇವೆ ಎಂಬುದನ್ನು ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಿಹಿಕಹಿ ಚಂದ್ರು ಅವರು ತಮ್ಮ ನಿದ್ದೆಯ ವೇಳೆಯನ್ನು ನಿರ್ಧರಿಸಿಕೊಂಡಿದ್ದಾರೆ, ಅದು ಫೈನ್. ಆದರೆ, ನಾಲ್ಕು ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದು ಟೈಂ ವೇಸ್ಟ್ ಎನ್ನುವುದು ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರವರ ನಿದ್ದೆ ಅವರವರಿಗೆ..’ ಎಂದಿದ್ದಾರೆ.  ಸ್ನೇಹ, ಸಂಬಂಧಗಳ ಬಗ್ಗೆ ಪೂಜಾ ಹೆಗಡೆ ಪಾಠ, ಅಷ್ಟೊಂದು ಅನುಭವ ಇದ್ಯಾ ಅಂತಿದಾರೆ ನೆಟ್ಟಿಗರು!

  • ದಸರಾ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಧಮಾಕ: ನಾಡಹಬ್ಬಕ್ಕೆ ತೆರೆ ಮೇಲೆ ಬರುತ್ತಂತೆ ‘ಡೆವಿಲ್’ ಚಿತ್ರ
    on May 9, 2024 at 5:51 am

    ನಟ ದರ್ಶನ್ ಕೈ ಮುರಿದುಕೊಂಡಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಕೊಂಡು ಬಂದಿರೋ ನಟ ಎರಡು ತಿಂಗಳು ರೆಸ್ಟ್ ಮಾಡಬೇಕಿ. ದರ್ಶನ್​ ಕೈಗೆ ಸರ್ಜರಿ ಆಗಿದ್ದನ್ನ ನೋಡಿ ಅವರ ಅಭಿಮಾನಿ ಬಳಗದಲ್ಲಿ ಆತಂಕ ಇತ್ತು. ಬೇಗ ಗುಣ ಮುಖವಾಗಿ ಅಂತ ಹಾರೈಸಿದ್ರು. ಈ ಮಧ್ಯೆ ದರ್ಶನ್ ನಟನೆಯ ಡೆವಿಲ್ ಸಿನಿಮಾ ಬಗ್ಗೆ ಸಿಗುತ್ತಿದ್ದ ಅಪ್ಡೇಟ್​ ಕೂಡ ನಿಂತು ಹೋಗಿತ್ತು. ಈಗ ದರ್ಶನ್ ಫ್ಯಾನ್ಸ್​​ಗೆ ಧಮಾಕೇ ದಾರ್​ ಸುದ್ದಿಯೊಂದು ಸಿಗುತ್ತಿದೆ. ಅದು ಡೆವಿಲ್ ಸಿನಿಮಾದ ಬಗ್ಗೆ. ಡೆವಿಲ್​, ಇದು ದರ್ಶನ್ ಫ್ಯಾನ್ಸ್ ಮತ್ತೊಮ್ಮೆ ಥಿಯೇಟರ್​ನಲ್ಲಿ ಎಂಜಾಯ್ ಮಾಡೋಕೆ ಕಾಯುತ್ತಿರೋ ಸಿನಿಮಾ. ಯಾಕಂದ್ರೆ ಕಾಟೇರದಲ್ಲಿ ಪಕ್ಕಾ ಹಳ್ಳಿ ಹೈದನಾಗಿ ಲುಂಗಿ ಉಟ್ಟು ಕುಲುಮೆಯಲ್ಲಿ ಮಚ್ಚು ತಟ್ಟುವ ರೋಲ್ ಮಾಡಿದ್ರು. ಈ ಪಾತ್ರ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ರು. ಈಗ ಅದರ ತದ್ವಿರುದ್ಧ ಆದ್ರೆ ಡೆವಿಲ್ ಸಿನಿಮಾದಲ್ಲಿ ಸ್ಟೈಲೀಶ್​​ ಲುಕ್​​ನಲ್ಲಿ ಯಶ್​​ ಕಾಣಿಸಿಕೊಂಡಿದ್ದಾರೆ.  ಈ ಸಿನಿಮಾ ದಸರಾ ಹಬ್ಬಕ್ಕೆ ತೆರೆ ಮೇಲೆ ತರಲು ಡೆವಿಲ್​ ಟೀಂ ಪ್ಲಾನ್ ಮಾಡುತ್ತಿದ್ದಾರೆ. ಕಾಟೇರ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ನೆಕ್ಟ್ಸ್​ ಡೇನ ಡೆವಿಲ್ ಸಿನಿಮಾ ಶೂಟಿಂಗ್ ಸೆಟ್ಟಿಗೆ ಬಂದಿದ್ರು ನಟ ದರ್ಶನ್. ಈ ಸಿನಿಮಾದ ಶೂಟಿಂಗ್ ಎಷ್ಟು ಸ್ಪೀಡ್ ಆಗಿ ನಡೆಯುತ್ತಿತ್ತು ಅಂದ್ರೆ ಒಂದೇ ತಿಂಗಳಲ್ಲಿ ಚಿತ್ರದ ಅರ್ದದಷ್ಟು ಶೂಟಿಂಗ್ ಆಗಿತ್ತು. ಆದ್ರೆ ಈ ಸಿನಿಮಾ ಶೂಟಿಂಗ್ ಮಾಡುವಾಗ್ಲೆ ದರ್ಶನ್ ಕೈಗೆ ಸರ್ಜರಿ ಮಾಡಿಸಿಕೊಂಡ್ರು ಇದ್ರಿಂದ ಡೆವಿಲ್ ಚಿತ್ರೀಕರಣ  ನಿಂತು ಹೋಯ್ತು. ಆಗಸ್ಟ್​ನಲ್ಲಿ ಡೆವಿಲ್ ರಿಲೀಸ್ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿದ್ದೆಲ್ಲಾ ಫ್ಲಾಫ್​ ಆಯ್ತು. ಈಗ ಡೆವಿಲ್ ರಿಲೀಸ್​ ಬಗ್ಗೆ ಅಪ್ಡೇಟ್ ಒಂದು ಬಂದಿದೆ. ದಸರಾ ಹಬ್ಬಕ್ಕೆ ದರ್ಶನ್ ಫ್ಯಾನ್ಸ್ ಧಮಾಕ ಮಾಡ್ತಾರೆ. ನಾಡ ಹಬ್ಬದಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗಲಿದೆಯಂತೆ.  ಡೆವಿಲ್​ ಸಾರಥಿ ಮಿಲನಾ ಪ್ರಕಾಶ್​ ಅಲಿಯಾಸ್ ಪ್ರಕಾಶ್ ವೀರ್ ಡೆವಿಲ್​​​ ಶೂಟಿಂಗ್​ಅನ್ನ  ಶೇಕಡ 70 ರಷ್ಟು ಮುಗಿಸಿದ್ದಾರೆ. ಇನ್ನು ಉಳಿದಿರೋದು 30ರಷ್ಟ ಮಾತ್ರ. ಆದ್ರೆ ಅಷ್ಟರಲ್ಲೇ ದರ್ಶನ್ ಕೈಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದ್ರಿಂದ ಶೂಟಿಂಗ್ ಎರಡು ತಿಂಗಳು ನಿಂತು ಹೋಗಿದೆ. ಡೆವಿಲ್​ ಸಿನಿಮಾವನ್ನ ಆಗಸ್ಟ್​​ಗೆ ರಿಲೀಸ್ ಮಾಡಬೇಕು ಅಂತ ಟಾರ್ಗೆಟ್ ಇಟ್ಕೊಂಡು ವರ್ಕ್ ಮಾಡುತ್ತಿದ್ರು. ಈಗ ಶೂಟಿಂಗ್ ಮುಂದಕ್ಕೆ ಹೋಗಿರೋದ್ರಿಂದ ಅಕ್ಟೋಬರ್​​​ಗೆ ಬರೋ ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ಕಣ್ಣಿಟ್ಟು ಕೂತಿದ್ದಾರಂತೆ. ನಟ ದರ್ಶನ್ ಕಮರ್ಷಿಯಲ್ ಸಿನಿಮಾಗಳ ಶೂಟಿಂಗ್​ಗೆ ಟೈಂ ಕೊಡೋದು 55 ದಿನ ಮಾತ್ರ. ಅಷ್ಟರೊಳಗೆ ಎಲ್ಲಾ ಚಿತ್ರೀಕರಣ ಮುಗಿಸೋ ಜವಾವ್ಧಾರಿ ನಿರ್ದೇಶಕನದ್ದು. ಆದ್ರೆ ಡೆವಿಲ್ ವಿಷಯದಲ್ಲಿ ಹಾಗಾಗಿಲ್ಲ. ದರ್ಶನ್​ ಕೈಗೆ ಪೆಟ್ಟಾಗಿದ್ರಿಂದ ಶೂಟಿಂಗ್ ಮುಂದಕ್ಕೆ ಹೋಗ್ತಿದೆ. ಹೀಗಾಗಿ ಡೆವಿನ್ ನೋಡೋದಕ್ಕೆ ದರ್ಶನ್ ಅಭಿಮಾನಿ ಬಳಗ ಇನ್ನೂ ಆರು ತಿಂಗಳು ಕಾಯಲೇಬೇಕು.

  • ಮೋದಿ ಸರ್ಕಾರದ ಎನ್‌ಇಪಿಗೆ ಕೊಕ್‌: ಈ ವರ್ಷದಿಂದ ಪದವಿ ವ್ಯಾಸಂಗ 3 ವರ್ಷಕ್ಕೆ ಕಡಿತ
    on May 9, 2024 at 5:47 am

    ಬೆಂಗಳೂರು(ಮೇ.09): ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳನ್ನು ಆಧರಿಸಿ ರಾಜ್ಯದಲ್ಲಿ 2024-25ನೇ ಸಾಲಿನಿಂದ ಪದವಿ ವ್ಯಾಸಂಗದ ಅವಧಿಯನ್ನು ನಾಲ್ಕು ವರ್ಷಗಳ ಬದಲು ಈ ಹಿಂದೆ ಇದ್ದಂತೆ ಮೂರು ವರ್ಷಗಳಿಗೆ ಸೀಮಿತಗೊಳಿಸಿ ಹಾಗೂ ಪದವಿ ಪಠ್ಯ ರಚನೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಸರ್ಕಾರ ಆದೇಶಿಸಿದೆ. ಆದರೆ, ಆದೇಶ ಅಥವಾ ಬದಲಾವಣೆಗಳು 2021-22, 2022-23, 2023-24 ನೇ ಶೈಕ್ಷಣಿಕ ವರ್ಷಗಳಲ್ಲಿ ಪದವಿಗೆ ಪ್ರವೇಶಾತಿ ಪಡೆದು ಪ್ರಸ್ತುತ ವಿವಿಧ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಅನ್ವಯಿಸುವುದಿಲ್ಲ. ಆ ವಿದ್ಯಾರ್ಥಿಗಳು ಪ್ರಸಕ್ತ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 4ನೇ ವರ್ಷದ ಆನರ್ಸ್ ಪದವಿ ವ್ಯಾಸಂಗ ಮಾಡುವುದು, ಬಿಡುವುದು ಅವರ ಆಯ್ಕೆಗೇ ಬಿಟ್ಟದ್ದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. NEP ನೀತಿಯಿಂದ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ, ವಿಶ್ವ ರ್‍ಯಾಂಕಿಂಗ್‌ ವರದಿ ಪ್ರಕಟ! ಇದರೊಂದಿಗೆ ಹಿಂದಿನ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) 2021-22ನೇ ಸಾಲಿನಿಂದ ದೇಶದಲ್ಲೇ ಮೊದಲು ಕರ್ನಾ ಟಕದಲ್ಲಿ ಜಾರಿಗೊಳಿಸಿ ಪದವಿ ವ್ಯಾಸಂಗವನ್ನು 4 ವರ್ಷಗಳಿಗೆ ಹೆಚ್ಚಿಸಿದ್ದ ಕ್ರಮಕ್ಕೆ ಕೊಕ್ ನೀಡಿದಂತಾಗಿದೆ. ಜೊತೆಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಹೀಗೆ ಬೇರೆ ಬೇರೆ ವಿಭಾಗದ ಮೇಜರ್ ವಿಷಯಗಳ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬಹುದಾದ ವ್ಯವಸ್ಥೆಗೂ ಕೆಲ ಮಾರ್ಪಾಡು ತರಲಾಗಿದೆ. ಬುಧವಾರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಇನ್ನುಂದೆ ರಾಜ್ಯದಲ್ಲಿ ಪದವಿ ವ್ಯಾಸಂಗ ಮೂರು ವರ್ಷಗಳಿಗೆ ಸೀಮಿತವಾಗಲಿದೆ. ಜೊತೆಗೆ ಪಠ್ಯ ವಿಷಯದ ಆಯ್ಕೆ ವೇಳೆ ಆರು ಸೆಮಿಸ್ಟರ್‌ಗಳಲ್ಲಿ ಒಂದೇ ವಿಭಾಗದ (ಕಲೆ ಅಥವಾ ವಿಜ್ಞಾನ ಅಥವಾ ವಾಣಿಜ್ಯ) ಮೂರು ಮೇಜರ್ ವಿಷಯ ಗಳೊಂದಿಗೆ ಸಾಮಾನ್ಯ ಪದವಿ ವ್ಯಾಸಂಗ ಮಾಡಬಹುದು. ಅಥವಾ 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಮೂರು ಮೇಜಯ್ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಪರ್ಯಾಯವಾಗಿ ಬೇರೆ ವಿಭಾಗದ ವಿಷಯವನ್ನು (ಸ್ಪೆಷಲೈಸೇಷನ್) ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಮೊದಲನೇ ಸೆಮಿಸ್ಟರ್‌ನಿಂದಲೇ ಇತರೆ ವಿಷಯಗಳ ಜೊತೆಗೆ ಒಂದು ವಿಶೇಷವಾದ ಬೇರೆ ವಿಭಾಗದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಬ ಹುದು ಎಂದು ತಿಳಿಸಿದೆ. ಇನ್ನು, ಎನ್‌ಇಪಿಯಲ್ಲಿ ವಿವಾದಕ್ಕೀಡಾಗಿದ್ದ ಮತ್ತೊಂದು ಅಂಶ ಪದವಿ ವ್ಯಾಸಂಗದ ವೇಳೆ ಮಧ್ಯೆ ಯಾವುದೇ ವರ್ಷ ಓದು ನಿಲ್ಲಿಸಬಹುದಿತ್ತು. ಈ ವೇಳೆ ಮೊದಲ ವರ್ಷಕ್ಕೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಡಿಪ್ಲೊಮಾ ಹೀಗೆ ಓದು ನಿಲ್ಲಿಸಿದ ವರ್ಷಕ್ಕೆ ಒಂದೊಂದು ಪ್ರಮಾಣ ಪತ್ರ ನೀಡಲು ಅವಕಾಶವಿತ್ತು. ಅದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿ ಮುಂದೆ ಯಾವಾಗ ಬೇಕಾದರೂ ಪದವಿ ವ್ಯಾಸಂಗ ಮುಂದುವರೆಸಬಹುದಿತ್ತು. ಸದ್ಯ ಈ ವ್ಯವಸ್ಥೆಯನ್ನು ಕೈಬಿಡುವ ಬಗ್ಗೆ ಯಾವುದೇ ಆಯೋಗವು ಮುಂದಿನ ಆಗಸ್ಟ್‌ನಲ್ಲಿ ನೀಡುವ ಅಂತಿಮ ವರದಿಯ ಆಧರಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ. 4 ವರ್ಷದ ಡಿಗ್ರಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಪಿಎಚ್‌ಡಿಗೆ ನೇರ ಅವಕಾಶ ವಿದೇಶಗಳಲ್ಲಿ ವಿಶೇಷವಾಗಿ ಅಮೇರಿಕಾದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ 4 ವರ್ಷದ ಪದವಿ ಪೂರ್ಣಗೊಳಿಸಿರಬೇಕು. ಈ ಜಾಗತಿಕ ಶೈಕ್ಷಣಿಕ ಪದ್ಧತಿಗಳೊಂದಿಗೆ ಸಾಮ್ಯತೆ ಸಾಧಿಸುವ ಉದ್ದೇಶದಿಂದ ಪದವಿ ವ್ಯಾಸಂಗದ ಅವಧಿಯನ್ನು ಎನ್‌ಇಪಿ ಅಡಿಯಲ್ಲಿ 4 ವರ್ಷಕ್ಕೆ ಹೆಚ್ಚಿಸಲಾಗಿದೆ.  ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭ 2024-25ನೇ ಸಾಲಿನ ಮೂರು ವರ್ಷದ ಪದವಿ ಪ್ರವೇಶ ಪ್ರಕ್ರಿಯೆಯು ಮೇ 9ರಿಂದ ಆರಂಭವಾಗಲಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಮೂಲಕ ಎಲ್ಲ ವಿವಿಗಳು ಮತ್ತು ಕಾಲೇಜುಗಳು ಪದವಿ ಪ್ರವೇಶ ಪ್ರಕ್ರಿಯೆ ನಡೆಸಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

  • 50ಕ್ಕೂ ಹೆಚ್ಚು ಹುಡುಗರ ಜೊತೆ ಸೆಕ್ಸ್‌, ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ ವ್ಯಕ್ತಿ ಅರೆಸ್ಟ್‌!
    on May 9, 2024 at 5:47 am

    ಲೈಂಗಿಕ ಸಂಪರ್ಕದ ಮೂಲಕ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ 50ಕ್ಕೂ ಹೆಚ್ಚು ಮಂದಿಗೆ ಎಚ್‌ಐವಿ ಹರಡಲು ಪ್ರಯತ್ನಿಸಿದ ಘಟನೆ ಯುಎಸ್‌ನಲ್ಲಿ ನಡೆದಿದೆ. 34 ವರ್ಷದ ವ್ಯಕ್ತಿಗೆ ಕನಿಷ್ಠ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲೆಕ್ಸಾಂಡರ್ ಲೂಯಿ ಎಂಬಾತ 16 ವರ್ಷದ ಓರ್ವ ಹುಡುಗ ಸೇರಿದಂತೆ 30ರಿಂದ 50 ವರ್ಷದ ಹಲವಾರು ಹುಡುಗರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಆದರೆ ಉದ್ದೇಶಪೂರ್ವಕವಾಗಿಯೇ ತನ್ನ ಆರೋಗ್ಯ ಸ್ಥಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿರಲ್ಲಿಲ್ಲ. ತಾನು HIV ಪಾಸಿಟಿವ್ ಎಂಬುದನ್ನು ಯಾರಲ್ಲೂ ಹೇಳಿರಲ್ಲಿಲ್ಲ. ಕಳೆದ ಆಗಸ್ಟ್‌ನಲ್ಲಿ ಲೂಯಿ ಅವರು 15 ವರ್ಷ ವಯಸ್ಸಿನ ಹುಡುಗನ ಜೊತೆ ಆನ್‌ಲೈನ್‌ನಲ್ಲಿ ಲೈಂಗಿಕ ಸಂಭಾಷಣೆಯನ್ನು ಪ್ರಾರಂಭಿಸಿದ ನಂತರ ಪ್ರಕರಣದ ತನಿಖೆ ಪ್ರಾರಂಭವಾಯಿತು. ತನಿಖೆಯ ನಂತರದ ಹಂತದಲ್ಲಿ ಅಲೆಕ್ಸಾಂಡರ್ ಲೂಯಿ, ಉದ್ದೇಶಪೂರ್ವಕವಾಗಿ ಲೈಂಗಿಕತೆಯ ಮೂಲಕ ಇತರರಿಗೆ ಎಚ್‌ಐವಿ ಹರಡಲು ಪ್ರಯತ್ನಿಸುತ್ತಿದ್ದ ಎಂಬುದು ತಿಳಿದುಬಂತು. ತನಿಖೆಯಲ್ಲಿ, ಲೂಯಿ ತನ್ನ HIV ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪೊಲೀಸರು ಕಂಡುಕೊಂಡರು. ಹೀಗೂ ಉಂಟೇ? ಫೇಶಿಯಲ್ ಮೂಲಕ ಎಚ್‌ಐವಿ ಸೋಂಕಿಗೆ ಒಳಗಾದ ಮಹಿಳೆಯರು! ಲೂಯಿ ಇಂಟರ್ನೆಟ್ ಮೂಲಕ ಹುಡುಗರನ್ನು ಪ್ರಚೋದಿಸುವುದು, ಅಪ್ರಾಪ್ತ ವಯಸ್ಕರ ಲೈಂಗಿಕ ಬ್ಯಾಟರಿ ಮತ್ತು ದೇಹದ ದ್ರವಗಳನ್ನು ವರ್ಗಾಯಿಸುವ ಪ್ರತಿಯೊಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಒಪ್ಪಿಕೊಂಡರು. ಸದ್ಯ ಇಲ್ಲಿನ ಪೊಲೀಸರು ಅಲೆಕ್ಸಾಂಡರ್‌ ಲೂಯಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ‘ಆರೋಪಿಯ ಪುನರಾವರ್ತಿತ ಮತ್ತು ಅತಿರೇಕದ ಅಪರಾಧಗಳು ಸಮುದಾಯದ ಅನೇಕ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ನಾವು ಶೀಘ್ರವಾಗಿ ತನಿಖೆ ನಡೆಸಿ ಮತ್ತಷ್ಟು ಅನಾಹುತವಾಗದಂತೆ ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • 25 ವರ್ಷಗಳಲ್ಲಿ ಇಂತಹ ಆಪಾದನೆ ಬಂದಿಲ್ಲ, ಮಾಡದ ತಪ್ಪು ಒಪ್ಪಿಕೊಳ್ಳುವಂತೆ ಅಧಿಕಾರಿಗಳ ಒತ್ತಡ: ಜಡ್ಜ್‌ಗೆ ರೇವಣ್ಣ ದೂರು
    on May 9, 2024 at 5:29 am

    ಬೆಂಗಳೂರು(ಮೇ.09): ‘ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿ, ನನಗೆ ಹಿಂಸೆ ಕೊಟ್ಟು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಎಸ್‌ಐಟಿ ಅಧಿಕಾರಿಗಳು ಒತ್ತಡಹಾಕಿದರು’ ಎಂದು ಎಸ್ ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಎಚ್.ಡಿ.ರೇವಣ್ಣ ಅವರು ನ್ಯಾಯಾಧೀಶರ ಎದುರು ಹೇಳಿದ್ದಾರೆ. ಲೈಂಗಿಕ ಹಗರಣದ ಶೋಷಿತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಬುಧವಾರ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಸ್‌ಐಟಿ ಕಾರಿನಲ್ಲಿ ಎಚ್.ಡಿ.ರೇವಣ್ಣ ಈ ವೇಳೆ ನ್ಯಾಯಾಧೀಶರು, ರೇವಣ್ಣ ಅವರಿಗೆ ಪ್ರಕರಣ ಕುರಿತು ವಿಚಾರಿಸಿದರು. ಆಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ರೇವಣ, ರಾಜಕೀಯ ಷಡ್ಕಂತ್ರ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅಳಲು ತೋಡಿಕೊಂಡರು. ಒಕ್ಕಲಿಗರಿಗೂ ಪ್ರಜ್ವಲ್‌ ಕಳಂಕಕ್ಕೂ ಸಂಬಂಧವಿಲ್ಲ: ಒಕ್ಕಲಿಗ ನಾಯಕರ ಆಕ್ರೋಶ “ನಾನು 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿಗೂ ಈ ರೀತಿ ಅಪಾದನೆ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿಯಾಗಿದ್ದೇನೆ. ನಾನು ತಪ್ಪು ಮಾಡಿಲ್ಲ. ಮಹಿಳೆ ಅಪಹರಣ ನಡೆದ ದಿನ ನಾನು ಊರಿನಲ್ಲೇ ಇರಲಿಲ್ಲ. ನಾನು ಯಾರಿಗೂ ಕರೆ ಮಾಡಿ ಮಾತು ಸಹ ಆಡಿಲ್ಲ. ಹೀಗಿದ್ದರೂ ನನ್ನನ್ನು ಮಹಿಳೆ ಅಪಹರಣದಲ್ಲಿ ಆರೋಪಿ ಮಾಡಿದ್ದಾರೆ’ ಎಂದು ತಿಳಿಸಿದರು. ‘ನನಗೆ ಎಸ್‌ಐಟಿ ಅಧಿಕಾರಿಗಳು ವಿವ ದೀತ ತೊಂದರೆ ಕೊಟ್ಟಿದ್ದಾರೆ. ವೈದ್ಯರು ಚಿಕಿತ್ಸೆ ಕೊಡಿಸುವಂತೆ ಹೇಳಿದರೂ ಕೂಡ ನನಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಯನ್ನು ಅಧಿಕಾರಿಗಳು ಕೊಡಿಸಿಲ್ಲ. ನಿನ್ನೆ ವಿಚಾರಣೆ ಎಲ್ಲ ಮುಗಿದಿದೆ ಎಂದು ಹೇಳಿ. ನನ್ನನ್ನು ಆಸ್ಪತ್ರೆಯಿಂದ ಅಧಿಕಾರಿಗಳು ಕರೆ ತಂದರು. ಆದರೆ ಇಂದು ಬೆಳಗ್ಗೆ ಮತ್ತೆ 2 ಗಂಟೆಗಳು ವಿಚಾರಣೆ ಮಾಡಿ ನನಗೆ ಕಿರು ಕುಳ ಕೊಟ್ಟಿದ್ದಾರೆ. ನಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಹಾಕಿದರು. ಮಾಡದ ತಪ್ಪನ್ನು ಹೇಗೆ ಒಪ್ಪಿ ಕೊಳ್ಳಲಿ ಎಂದು ರೇವಣ್ಣನಿವೇದಿಸಿದರು. ಕಾಂಗ್ರೆಸ್‌ನವ್ರು ಹಿಡನ್ ಕ್ಯಾಮೆರಾ ಇಟ್ಟು ರೆರ್ಕಾಡ್ ಮಾಡಿಸಿದ್ದಿವಾ?: ಎಚ್‌ಡಿಕೆಗೆ ಪ್ರಿಯಾಂಕ್‌ ಪ್ರಶ್ನೆ ನಾನು ನನ್ನ ಕೈಲಾದ ಮಟ್ಟಿಗೆ ಅಧಿಕಾರಿ ಗಳ ತನಿಖೆಗೆ ಸಹಕರಿಸಿದ್ದೇನೆ. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದಕ್ಕಿಂತ ಅನ್ನು ತನಿಖೆಗೆ ಸಹರಿಸಲು ನನ್ನಿಂದ ಸಾಧ್ಯವಿಲ್ಲ ಕಳೆದ ಮೂರು ದಿನಗಳಿಂದ ನಾನು ನಿದ್ದೆ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನಾನು ಸಭ್ಯ ರಾಜಕಾರಣ ಮಾಡಿದ್ದೇನೆ. ಕಾನೂನಿಗೆ ತಲೆಬಾಗಿ ನಡೆದುಕೊಂಡಿದ್ದೇನೆ ಎಂದು ಭಾವುಕರಾಗಿ ನುಡಿದರು. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ ಬೆಂಗಳೂರು: ಲೈಂಗಿಕ ಪ್ರಕರಣದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಮುಂದೂಡಿದೆ. ಬುಧವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲ ಕಾಲಾವಕಾಶ ನೀಡುವಂತೆ ಎಸ್‌ಐಟಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ನ್ಯಾಯಾಲಯವು ಗುರುವಾರ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿ ವಿಚಾರಣೆಯನ್ನು ಮುಂದೂಡಿತು.

  • ದುಬಾರಿ ಕಾರು ಖರೀದಿಸಿದ ನಟ ಅಭಿಷೇಕ್ ಅಂಬರೀಷ್: ಕಾರಿನ ಬೆಲೆ ಎಷ್ಟು ಗೊತ್ತಾ?
    on May 9, 2024 at 5:23 am

    ನಟ ಅಭಿಷೇಕ್ ಅಂಬರೀಶ್ ಅವರು ಕೋಟಿ ಬೆಲೆಯ BMW ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ x7 ಎಂಬ ಹೆಸರಿನ ಕಾರನ್ನು ಖರೀದಿಸಿದ ಅಭಿಷೇಕ್ ಅಂಬರೀಶ್ ಅವರು ನಿವಾಸದ ಸುತ್ತಮತ್ತ ಡ್ರೈವ್ ಮಾಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಿಎಂಡಬ್ಲ್ಯೂ ಕಾರು 1 ಕೋಟಿ 30 ಲಕ್ಷಬೆಲೆಯುಳ್ಳದಾಗಿದೆ. ಡಾಲಿ  ಕೋಟಿ ವಿಲನ್ ಇವರೆ: ನಿರ್ದೇಶಕ ಪರಮ್ ಅವರು ‘ಕೋಟಿ’ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ. ವಿಲನ್ ಪಾತ್ರದ ಕಿರು ಪರಿಚಯವನ್ನು ಅವರು ಈ ಪೋಸ್ಟರ್ ಮೂಲಕ ಮಾಡಿಸಿದ್ದಾರೆ. ರಮೇಶ್ ಇಂದಿರಾ ಅವರು ‘ಕೋಟಿ’ ಸಿನಿಮಾದಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ. ಅವರ ಎದುರು ವಿಲನ್ ಆಗಿ ಅಬ್ಬರಿಸುವುದು ರಮೇಶ್ ಇಂದಿರಾ. ಈಗಾಗಲೇ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಖಳನಾಗಿ ಗಮನ ಸೆಳೆದಿದ್ದಾರೆ. ‘ಕೋಟಿ’ ಸಿನಿಮಾದಲ್ಲೂ ಅವರಿಗೆ ಡಿಫರೆಂಟ್ ಆದಂತಹ ವಿಲನ್ ಪಾತ್ರವಿದೆ. ದಿನೂ ಸಾವ್ಕಾರ್ ಎಂಬುದು ಆ ಪಾತ್ರದ ಹೆಸರು.  ಬೆಸ್ಟ್ ವರ್ಸಟೈಲ್ ನಟಿ- ನಯನತಾರಾ: ‘ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್’ನಲ್ಲಿ ನಟಿ ನಯನತಾರಾಗೆ ‘ಬೆಸ್ಟ್ ವರ್ಸಟೈಲ್ ನಟಿ ‘ ಪ್ರಶಸ್ತಿ ನೀಡಿ ಗೌರವಿಸಲಗಿದೆ. ವಿಭಿನ್ನ ಪಾತ್ರಗಳ ಮೂಲಕ ಸೌತ್ ಹಾಗೂ ನಾರ್ತ್ ಚಿತ್ರರಂಗಗಳಲ್ಲಿ ಬಹುಬೇಡಿಕೆಯಲ್ಲಿರುವ ನಟಿ ನಯನತಾರಾ ‘ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ’ ಪ್ರಶಸ್ತಿ ಗಳಿಸಿದ್ದಾರೆ.

  • ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್
    on May 9, 2024 at 5:22 am

    ಬೆಂಗಳೂರು (ಮೇ.09): ರಾಜ್ಯದಲ್ಲಿ 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ 2023-24 ನೇ ಸಾಲಿನ ಶೇಕಡಾವಾರು ಫಲಿತಾಂಶ 73.40ಕ್ಕೆ ಕುಸಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.10 ಪರ್ಸೆಂಟ್ ಕುಸಿತವಾಗಿದೆ. ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.   ಪ್ರಸ್ತುತ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ವತಿಯಿಂದ ಮಾರ್ಚ್ 25 ಮತ್ತು ಏಪ್ರಿಲ್ 6ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಫಲಿತಾಂಶ ಹೊರ ಬಿದ್ದಿದೆ. ಈ ಪೈಕಿ ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.   ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವಿರ  1)ಅಂಕಿತಾ ಬಸಪ್ಪ ಕೊನ್ನೂರು  (625/625)  (ರಾಜ್ಯಕ್ಕೆ ಫ್ರಥಮ) ದ್ವೀತಿಯ ಸ್ಥಾನ 7 ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ: 1) ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625 2) ಹರ್ಷಿತಾ ಡಿಎಂ (ಮಧುಗಿರಿ) 3)ಚಿನ್ಮಯ್ (ದಕ್ಷಿಣ ಕನ್ನಡ) 4)ಸಿದ್ದಾಂತ್ (ಚಿಕ್ಕೊಡಿ ) 5)ದರ್ಶನ್ (ಶಿರಸಿ) 6) ಚಿನ್ಮಯ್ (ಶಿರಸಿ) 7)ಶ್ರೀರಾಮ್ (ಶಿರಸಿ) ಬಾಗಲಕೋಟೆ ಮೊರಾರ್ಜಿ ಶಾಲೆ ಅಂಕಿತಾ ಕೊನ್ನೂರು ಟಾಪರ್: ಲಿಂಗವಾರು ಒಟ್ಟಾರೆ ಫಲಿತಾಂಶ:  ಬಾಲಕರು: 2,87,416 (65.90%) ಬಾಲಕಿಯರು; 3,43,788 (81.11%) SSLC ಪರೀಕ್ಷೆಯಲ್ಲಿ ಬಾಲಕಿಯರ ಮೇಲುಗೈ ಸಾಧಿಸಿದ್ದಾರೆ.  ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ : 1) ಉಡುಪಿ – ಪ್ರಥಮ ಸ್ಥಾನ (94%) 2) ದಕ್ಷಿಣ ಕನ್ನಡ – ದ್ವೀತಿಯ ಸ್ಥಾನ(92.12%) 3) ಶಿವಮೊಗ್ಗ- ತೃತೀಯ ಸ್ಥಾಮ (88.67%) 35)  ಯಾದಗಿರಿ – ಕೊನೇ ಸ್ಥಾನ – (ಶೇ.50.59) ಜಿಲ್ಲಾವಾರು ಫಲಿತಾಂಶದ ಪಟ್ಟಿ ಇಲ್ಲಿದೆ ನೋಡಿ..

  • 3 ವರ್ಷಗಳ ಬಳಿಕ ಜಾವೆಲಿನ್ ತಾರೆ ನೀರಜ್‌ ಚೋಪ್ರಾ ಭಾರತದಲ್ಲಿ ಸ್ಪರ್ಧೆ
    on May 9, 2024 at 5:19 am

    ನವದೆಹಲಿ: ಜಾವೆಲಿನ್‌ ಎಸೆತದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ 3 ವರ್ಷಗಳ ಬಳಿಕ ಭಾರತದಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಮೇ 12ರಿಂದ 15ರ ವರೆಗೆ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಫೆಡರೇಶನ್‌ ಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 26ರ ನೀರಜ್‌ 2021ರ ಮಾರ್ಚ್‌ನಲ್ಲಿ ಕೊನೆ ಬಾರಿ ಭಾರತದಲ್ಲಿ ಫೆಡರೇಶನ್‌ ಕಪ್‌ನಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರು 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌, 2022ರಲ್ಲಿ ಡೈಮಂಡ್‌ ಲೀಗ್, 2023ರಲ್ಲಿ ವಿಶ್ವ ಚಾಂಪಿಯನ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ. ಅವರ ಜೊತೆ ಕಿಶೋರ್‌ ಜೆನಾ ಕೂಡಾ ಕಣಕ್ಕಿಳಿಯಲಿದ್ದಾರೆ. ಆರ್‌ಸಿಬಿ vs ಪಂಜಾಬ್ ಕಿಂಗ್ಸ್: ಪ್ಲೇ ಆಫ್‌ ರೇಸ್ ಗೆಲ್ಲೋರು ಯಾರು? ಇಂದಿನಿಂದ ಒಲಿಂಪಿಕ್ಸ್ ಅರ್ಹತಾ ಕುಸ್ತಿ ಇಸ್ತಾಂಬುಲ್ (ಟರ್ಕಿ): ಒಲಿಂಪಿಕ್ಸ್ ವಿಶ್ವ ಅರ್ಹತಾ ಕುಸ್ತಿ ಚಾಂಪಿಯನ್‌ಶಿಪ್ ಗುರುವಾರದಿಂದ ಆರಂಭಗೊಳ್ಳಲಿದೆ. ಇದು ಈ ಬಾರಿ ಒಲಿಂಪಿಕ್ಸ್ ಕುಸ್ತಿಯ ಕೊನೆ ಅರ್ಹತಾ ಟೂರ್ನಿಯಾಗಿದ್ದು, ಕೋಟಾಗಳು ಲಭ್ಯವಿದೆ. ಭಾರತದ 14 ಮಂದಿ ಸ್ಪರ್ಧಿಸಲಿದ್ದು, ಗರಿಷ್ಠಪ್ರಮಾಣದಲ್ಲಿ ಕೋಟಾ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಭಾರತದಿಂದ ಈವರೆಗೆ ವಿವಿಧ ಅರ್ಹತಾ ಕೂಟಗಳ ಮೂಲಕ ನಾಲ್ವರು ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ. ಪುರುಷರು ಈ ವರೆಗೂ ಒಂದೂ ಕೋಟಾ ಗೆದ್ದಿಲ್ಲ. ಇತ್ತೀಚೆಗೆ ಕಜಕಸ್ತಾನದ ಬಿಷೇಕ್‌ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿ ಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಅಮನ್ (57), ಸುಜೀತ್ (65), ಜೈದೀಪ್ (74), ದೀಪಕ್ ಪೂನಿಯಾ(86), ದೀಪಕ್  (97) ಹಾಗೂ ಸುಮಿತ್ (125 ), ಮಹಿಳಾ ಫ್ರೀಸ್ಟೈಲ್ ನಲ್ಲಿ ಮಾನಿ(62), ನಿಶಾ(68 ) ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಮೊದಲ ಬಾರಿಗೆ ಬುಮ್ರಾ ಮಗನ ಮುಖ ರಿವೀಲ್; ವಾಂಖೇಡೆಯಲ್ಲಿ ಅಪ್ಪನ ಆಟ ಎಂಜಾಯ್ ಮಾಡಿದ ಅಂಗದ್ ಹಡಗಿನಲ್ಲಿ ಫ್ರಾನ್‌ಗೆ ಆಗಮಿಸಿದ ಪ್ಯಾರಿಸ್ ಒಲಿಂಪಿಕ್ಸ್‌ ಜ್ಯೋತಿ ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಬುಧವಾರ ಫ್ರಾನ್ಸ್‌ನ ಬಂದರು ನಗರ ಮಾರ್ಸೆಗೆ ಆಗಮಿಸಿದೆ. ಇತ್ತೀಚೆ ಗಷ್ಟೇ ಗ್ರೀಸ್‌ನಲ್ಲಿ ಸಂಪ್ರದಾಯದಂತೆ ಒಲಿಂಪಿಕ್ಸ್ ಜ್ಯೋತಿ ಬೆಳಗಿಸಲಾಗಿತ್ತು. ಅಲ್ಲಿಂದ 19ನೇ ಶತಮಾನದ ಹಡಗು ‘ಬೆಲೆಮ್’ ಮೂಲಕ ಜ್ಯೋತಿಯನ್ನು ಫ್ರಾನ್ಸ್‌ಗೆ ತರಲಾಗಿದೆ. ಜ್ಯೋತಿ ಹಸ್ತಾಂತರ ಪ್ರಕ್ರಿಯೆ ವೇಳೆ ಲಕ್ಷಾಂತರ ಮಂದಿ ಸೇರಿದ್ದರು. ಇನ್ನು ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಸುಮಾರು 12000 ಕಿ.ಮೀ. ದೂ ಒಲಿಂಪಿಕ್ಸ್‌ ಜ್ಯೋತಿ ಯಾತ್ರೆ ಸಂಚರಿಸಲಿದೆ.  

  • ‘ಸಿಕಂದರ್’ ಚಿತ್ರಕ್ಕೆ ಸಹಿ ಹಾಕಿದ ರಶ್ಮಿಕಾ ಮಂದಣ್ಣ; ಸಲ್ಮಾನ್ ಖಾನ್‌ಗೂ ನೀವೇ ಬೇಕಾ ಎಂದ ನೆಟ್ಟಿಗರು!
    on May 9, 2024 at 5:04 am

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನ ಬೇಡಿಕೆಯ ನಟಿ. ಸೂಪರ್ ಸ್ಟಾರ್‌ಗಳ ಜೊತೆ ಸೂಪರ್ ಹಿಟ್‌ ಆಗುವಂತ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಬ್ಯಾಡ್‌ ಬಾಯ್‌ ಸಲ್ಮಾನ್ ಖಾನ್‌ಗೆ ಜೋಡಿಯಾಗಿದ್ದಾರೆ. 2025ರ ಈದ್‌ ಸಿನಿ ರಸಿಕರಿಗೆ ಹಬ್ಬವಾಗಿರಲಿದೆ. ಹೌದು! ‘ನಮ್ಮಲ್ಲರ ನೆಚ್ಚಿನ ನಟಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಒಟ್ಟಿಗೆಯಾಗಿ ನಟಿಸುತ್ತಿರುವ ಶಿಕಂದರ್ ಸಿನಿಮಾ 2025ರ ಈದ್‌ಗೆ ರಿಲೀಸ್ ಆಗಲಿದೆ. ದೊಡ್ಡ ತೆರೆ ಮೇಲೆ ಈ ಕಾಂಬಿನೇಷನ್‌ ನೋಡಲು ಕಾಯುತ್ತಿದ್ದೀವಿ’ ಎಂದು ನಾಡಿಯಾವಾಲಾ ಗ್ರಾಂಡ್‌ಸನ್‌ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಚಿತ್ರವನ್ನು ಏ ಆರ್‌ ಮುರುಗಾದಾಸ್‌ ನಿರ್ದೇಶನ ಮಾಡುತ್ತಿದ್ದಾರೆ.  ಆಲಿಯಾ ಭಟ್ ನಟನೆಗೆ ‘ಶಭಾಷ್’ ಅಂದ್ಬಿಟ್ರು, ‘ಗಂಗೂಬಾಯಿ ಕಥಿಯಾವಾಡಿ’ ಬಗ್ಗೆ ರಶ್ಮಿಕಾ ಹೇಳಿದ್ದೇನು? ‘ನೀವೆಲ್ಲರೂ ತುಂಬಾ ದಿನಗಳಿಂದ ಅಪ್‌ಡೇಟ್‌ ನೀಡಿ ಎಂದು ಕೇಳುತ್ತಿದ್ದೀರಿ, ಇಲ್ಲಿದೆ ನೋಡಿ….ಸರ್ಪ್ರೈಸ್. ಶಿಕಂದರ್‌ ಚಿತ್ರತಂಡದ ಜೊತೆ ಕೆಲಸ ಮಾಡಲು ತುಂಬಾನೇ ಖುಷಿಯಾಗುತ್ತಿದೆ’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ.  2022ರಲ್ಲಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್‌ ಮಲ್ಹೋತ್ರಾ ಜೊತೆ 2023ರಲ್ಲಿ ಮಿಷನ್ ಮಜನು ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಗೆ ರಶ್ಮಿಕಾ ಮಾರ್ಕೆಟ್‌ ಹೆಚ್ಚಾಗಿತ್ತು…ಅದೇ ವರ್ಷ ರಣಬೀರ್‌ ಕಪೂರ್‌ ಜೊತೆ ನಟಿಸಿರುವ ಅನಿಮಲ್ ಸಿನಿಮಾ ರಿಲೀಸ್ ಆಯ್ತು. ಮೂರು ಹಿಂದಿ ಸಿನಿಮಾಗಳು ಹಿಟ್ ಆದ ಬೆನ್ನಲೆ ರಶ್ಮಿಕಾ ಚಾವಾ ಚಿತ್ರಕ್ಕೆ ಸಹಿ ಹಾಕಿ ಚಿತ್ರೀಕರಣ ಆರಂಭಿಸಿದ್ದರು. ಇದರ ನಡುವೆ ಶಿಕಂದರ್ ಸಿನಿಮಾ ಅನೌನ್ಸ್ ಮಾಡಿದ್ದಾರೆ.   You guys for a long time have been asking me for the next update and here it is.. ❤️ Surprise!! ✨ I am truly grateful and honoured to be a part of #Sikandar #SajidNadiadwala @BeingSalmanKhan @ARMurugadoss @NGEmovies @WardaNadiadwala Releasing in cinemas on EID 2025! 🌙❤️✨… https://t.co/xegNMOkt5u — Rashmika Mandanna (@iamRashmika) May 9, 2024

  • ಸಮಂತಾ ಬೆತ್ತಲೆ ಫೋಟೋ ಲೀಕ್: ಅಸಲಿ ಕಥೆ ಬೇರೇನೇ ಇದೆ!
    on May 9, 2024 at 4:58 am

    ಸಮಂತಾ ರುತ್ ಪ್ರಭು ಅವರ  ಅರೆಬೆತ್ತಲೆ ಫೋಟೋ ಒಂದು ವೈರಲ್‌ ಆಗಿದೆ. ಆದರೆ ಇದು ಅಸಲಿಗೆ ಸಮಂತಾ ಅವರೇನಾ ಎಂಬ ಅನಮಾನ ಸಹ ಕಾಡುತ್ತಿದೆ.ವೈರಲ್ ಆದ ಈ ಫೋಟೋವನ್ನು ಸಮಂತಾ ಇನ್‌ಸ್ಟಾಗ್ರಾಮ್ ಸ್ಟೇಟಸ್‌ಗೆ ಹಾಕಿ ನಂತರ ಡಿಲೀಟ್ ಮಾಡಿದ್ದಾರೆ ಎಂದು ಬಿಂಬಿದಲಾಗುತ್ತಿದೆ. ಸಮಂತಾ ಚೇರ್ ಮೇಲೆ ಕುಳಿತ ಫೋಟೋ, ಬಾತ್​ ಟಬ್‌ನಲ್ಲಿ ಅರೆಬೆತ್ತಲಾಗಿ ಕುಳಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.ಆದರೆ ಅಲಿ ವಿಚಾರವೇ ಬೇರೆ ಆಗಿದೆ. ಇದು ಸಮಂತಾ ಅವರ ಫೋಟೋ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಲಾಗ್ತಿದೆ. ಅಸಲಿಗೆ ಇದು ಸಮಂತಾ ಅಲ್ಲವೇ ಅಲ್ಲ. ಇದು ಫೇಕ್ ಫೋಟೋ ಆಗಿದ್ದು, ಸಮಂತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಸಲಿಗೆ ಇದು ತಿರುಚಿದ ಫೋಟೋ ಎಂಬುದು ಗೊತ್ತಾಗಿದ್ದು, ಇಂಥ ಕಿಡಿಗೇಡಿತನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಂತಾ ಫ್ಯಾನ್ಸ್‌ ಆಗ್ರಹಿಸುತ್ತಿದ್ದಾರೆ.

  • ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಲೇಬೇಡಿ, ಕಾರಣ ಇಲ್ಲಿದೆ
    on May 9, 2024 at 4:58 am

    ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಿರುವಂತೆ ನೋಡಿಕೊಳ್ಳವುದು ಬಹಳ ಮುಖ್ಯ. ದೇಹ ತಂಪಾಗಿರಲು ದೇಹದಲ್ಲಿ ನೀರಿನ ಅಂಶ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿಯೇ ಸಮ್ಮರ್‌ ಟೈಂನಲ್ಲಿ ಎಲ್ಲರೂ ಹೆಚ್ಚೆಚ್ಚು ನೀರು ಕುಡಿಯುತ್ತಾರೆ. ಜ್ಯೂಸ್‌, ಎಳನೀರು ಮೊದಲಾದವುಗಳ ಸೇವನೆಗೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಎಳನೀರಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ತಂಪು ಮಾಡುವುದಲ್ಲದೆ, ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ರೆ ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದು ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ? ಎಳನೀರು ಸೇವನೆ ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಬೆಸ್ಟ್‌. ಇದು ಜೀರ್ಣಕ್ರಿಯೆಗೆ ಉತ್ತಮ. ಮಾತ್ರವಲ್ಲ ಎಳನೀರಿನ ಸೇವನೆ ದಿನವಿಡೀ ಎನರ್ಜಿಟಿಕ್ ಆಗಿರುವಂತೆ ಮಾಡುತ್ತದೆ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಅಮಿನೋ ಆಸಿಡ್‌ ಮೊದಲಾದ ಅಂಶಗಳಿರುತ್ತವೆ. ಇದು ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಡೋ ಅಜೀರ್ಣ, ಎದೆಯುರಿ, ಹೊಟ್ಟೆ ಉಬ್ಬರ ಮೊದಲಾದ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಹಣ್ಣು ಸೇವಿಸಿ ಸಾಮಾನ್ಯವಾಗಿ ಎಲ್ಲರೂ ರಸ್ತೆಬದಿಯಲ್ಲಿ ಎಳನೀರು ಮಾರುವವರ ಬಳಿ ಹೋಗಿ ಅವರು ಕೊಟ್ಟ ಎಳನೀರನ್ನು ಸ್ಟ್ರಾ ಆಗಿ ಕುಡಿದುಬಿಡುತ್ತಾರೆ. ಆದ್ರೆ ಹೀಗೆ ಮಾಡಲೇಬಾರದು. ಎಳನೀರಿನಿಂದ ನೀರನ್ನು ಕುಡಿಯುವ ಬದಲು ಎಳನೀರಿನ ಒಳಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಯಾಕೆಂದರೆ ಎಳನೀರಿನ ಒಳಗೆ ಮೋಲ್ಡ್ ಎಂಬ ವಿಧದ ಒಂದು ರೀತಿಯ ಫಂಗಸ್ ಬೆಳೆಯುವ ಸಾಧ್ಯತೆ ಇರುತ್ತದೆ. ಎಳನೀರಿನ ಒಳಭಾಗವನ್ನು ಪರಿಶೀಲಿಸದೇ ಅದರಲ್ಲಿರುವ ನೀರು ಕುಡಿಯುವುದರಿಂದ ಆ ಫಂಗಸ್‌ ನಮ್ಮ ದೇಹವನ್ನು ಸೇರಬಹುದು. ಮಾತ್ರವಲ್ಲ ಅಲರ್ಜಿ, ಉಸಿರಾಟದ ಸಮಸ್ಯೆ ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಯಾವಾಗಲೂ ಎಳನೀರನ್ನು ಕಟ್‌ ಮಾಡಿದ ನಂತರ ಅದನ್ನು ಲೋಟಕ್ಕೆ ಸುರಿದು ಕುಡಿಯುವುದು ಸರಿಯಾದ ವಿಧಾನ ಅಂತಾರೆ ಆರೋಗ್ಯ ತಜ್ಞರು. ಹೆಚ್ಚು ನೀರಿರುವ ಎಳನೀರು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​

24X7 ಲೈವ್ ನ್ಯೂಸ್ ಟಿವಿ/ವೆಬ್ ಪೋರ್ಟಲ್/ಲೈವ್ ಆ್ಯಪ್/ಡೈಲಿ ಇ ನ್ಯೂಸ್ ಪೇಪರ್ ಬಹುರಾಷ್ಟ್ರೀಯ ಮತ್ತು ಬಹುಭಾಷಾ ಲೈವ್ ನ್ಯೂಸ್ ಮತ್ತು ಇತ್ತೀಚಿನ ಅಪ್‌ಡೇಟ್‌ಗಳು, ಅಂತಾರಾಷ್ಟ್ರೀಯದಿಂದ ರಾಷ್ಟ್ರೀಯ ಸುದ್ದಿ, ರಾಜಕೀಯದಿಂದ ಸಾಮಾಜಿಕ, ತಾಂತ್ರಿಕ ಮತ್ತು ವ್ಯವಹಾರ, ಕ್ರೀಡಾ ಸುದ್ದಿ, ಸ್ಥಳೀಯದಿಂದ ಜಾಗತಿಕ ನಿಷ್ಪಕ್ಷಪಾತ ಸುದ್ದಿ ಪ್ರಸಾರ. ನಮ್ಮೊಂದಿಗೆ 24X7 ಲೈವ್ ನ್ಯೂಸ್ ಟಿವಿಯಲ್ಲಿ ನವೀಕೃತವಾಗಿರಿ! ನಿಷ್ಪಕ್ಷಪಾತ, ಬೌದ್ಧಿಕ, ಅಂತರರಾಷ್ಟ್ರೀಯ, IOB ಸುದ್ದಿ ನೆಟ್‌ವರ್ಕ್‌ನೊಂದಿಗೆ ನವೀಕರಿಸಿ